ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಭಾರತದಲ್ಲಿನ ರೂಪಾಂತರ ವೈರಸ್‌ನ ಸೋಂಕು ಪ್ರಕರಣ ಇಸ್ರೇಲ್‌ನಲ್ಲಿ ಪತ್ತೆ

Last Updated 20 ಏಪ್ರಿಲ್ 2021, 10:56 IST
ಅಕ್ಷರ ಗಾತ್ರ

ಜೆರುಸಲೇಮ್‌: ಭಾರತದಲ್ಲಿ ಕಂಡು ಬಂದಿರುವ ರೂಪಾಂತರಕೊರೊನಾ ವೈರಸ್‌ ತಳಿಯ ಸೋಂಕಿನ 8 ಪ್ರಕರಣಗಳು ಇಸ್ರೇಲ್‌ನಲ್ಲಿ ವರದಿಯಾಗಿವೆ.

ಈ ಸೋಂಕಿನ ವಿರುದ್ಧ ಫೈಜರ್‌ ಕಂಪನಿಯ ಲಸಿಕೆ ಭಾಗಶಃವಾದರೂ ಪರಿಣಾಮಕಾರಿ ಎಂಬ ವಿಶ್ವಾಸ ಇದೆ ಎಂದು ಆರೋಗ್ಯ ಸಚಿವಾಲಯದ ಮಹಾ ನಿರ್ದೇಶಕ ಹೆಜಿ ಲೆವಿ ಮಂಗಳವಾರ ತಿಳಿಸಿದರು.

ವಿದೇಶಗಳಿಂದ ಹಲವಾರು ಜನರು ಕಳೆದ ವಾರ ಇಲ್ಲಿಗೆ ಬಂದಿದ್ದಾರೆ. ಅವರ ಪೈಕಿ, ಮೊದಲು 7 ಜನರಲ್ಲಿ ಭಾರತದಲ್ಲಿ ಕಂಡು ಬಂದಿರುವ ವೈರಸ್‌ನ ತಳಿಯ ಸೋಂಕು ದೃಢಪಟ್ಟಿತ್ತು. ಈಗ ಅಂಥ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿದೆ ಎಂದೂ ಸಚಿವಾಲಯ ತಿಳಿಸಿದೆ.

ಇಸ್ರೇಲ್‌ನ ಜನಸಂಖ್ಯೆ 90.3 ಲಕ್ಷದಷ್ಟಿದೆ. ಈ ಪೈಕಿ, 16 ವರ್ಷ ಮೇಲ್ಪಟ್ಟ ವಯೋಮಾನದ ಶೇ 81ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಈ ಕಾರಣದಿಂದ ಕೋವಿಡ್‌–19 ಪ್ರಕರಣಗಳು ಕಡಿಮೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಕೆ ಕಂಡು ಬಂದಿದೆ ಎಂದು ಸಚಿವಾಲಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT