ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ವಾಯುದಾಳಿ

Last Updated 23 ಅಕ್ಟೋಬರ್ 2020, 6:54 IST
ಅಕ್ಷರ ಗಾತ್ರ

ಜೆರುಸಲೇಂ: ಪ್ಯಾಲೆಸ್ಟೈನ್‌ ಮೂಲದ ಉಗ್ರರು ಎರಡು ರಾಕೆಟ್‌ಗಳ ಮೂಲಕ ದಾಳಿ ಮಾಡಿದ ಬೆನ್ನಲ್ಲೇ, ಗಾಜಾ ಪಟ್ಟಿಯಲ್ಲಿ ವಾಯುದಾಳಿ ನಡೆಸಿ ಪ್ರತ್ಯುತ್ತರ ನೀಡಿದ್ದಾಗಿ ಇಸ್ರೇಲ್‌ ಶುಕ್ರವಾರ ಹೇಳಿದೆ.

ಎರಡೂ ಕಡೆಗಳಲ್ಲಿ ಪ್ರಾಣಾಪಾಯ ಅಥವಾ ಭಾರಿ ಪ್ರಮಾಣದ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

‘ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಶಸ್ತ್ರಾಸ್ತ್ರ ತಯಾರಿಕಾ ಘಟಕ ಹಾಗೂ ಸುರಂಗದ ಮೇಲೆ ಯುದ್ಧವಿಮಾನಗಳನ್ನು ಬಳಸಿ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ನ ಸೇನೆ ತಿಳಿಸಿದೆ.

ಗುರುವಾರ ಇಸ್ರೇಲ್‌ ಮೇಲೆ ಪ್ಯಾಲೆಸ್ಟೈನ್‌ ಉಗ್ರರು ರಾಕೆಟ್‌ ದಾಳಿ ನಡೆಸಿದ್ದರು. ಒಂದು ರಾಕೆಟ್ ‌ಅನ್ನು ಇಸ್ರೇಲ್‌ನ ಕ್ಷಿಪಣಿಗಳು ಹೊಡೆದುರುಳಿಸಿದ್ದರೆ, ಮತ್ತೊಂದು ರಾಕೆಟ್‌ ಬಯಲು ಪ್ರದೇಶದಲ್ಲಿ ಬಿದ್ದಿತ್ತು ಎಂದು ಮೂಲಗಳು ಹೇಳಿವೆ.

2007ರಲ್ಲಿ ಪ್ಯಾಲೆಸ್ಟೈನ್‌ ಪಡೆಗಳಿಂದ ಅಧಿಕಾರ ಕಿತ್ತುಕೊಂಡಿದ್ದ ಹಮಾಸ್‌ ಉಗ್ರ ಸಂಘಟನೆ, ಆಗಿನಿಂದಲೂ ಇಸ್ರೇಲ್‌ನೊಂದಿಗೆ ಸಂಘರ್ಷದಲ್ಲಿ ನಿರತವಾಗಿದೆ. ಈ ವರೆಗೆ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಮೂರು ಬಾರಿ ಯುದ್ಧಗಳು ನಡೆದಿದ್ದು, ಆಗಾಗ ಗುಂಡಿನ ಚಕಮಕಿಯೂ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT