ಸೋಮವಾರ, ಜೂನ್ 14, 2021
25 °C

ಹಮಸ್‌ ಸಂಘಟನೆ ಮುಖಂಡನ ಮನೆ ಗುರಿಯಾಗಿಸಿ ದಾಳಿ ನಡೆಸಿದ ಇಸ್ರೇಲ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಜೆರುಸಲೇಮ್‌: ಹಮಸ್‌ ಸಂಘಟನೆಯ ಹಿರಿಯ ಮುಖಂಡ ಯೆಹಿಯೆಹ್‌ ಸಿನ್ವರ್‌ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಇಸ್ರೇಲ್‌ ಮಿಲಿಟರಿಯ ವಕ್ತಾರ ಬ್ರಿಗೇಡಿಯರ್‌ ಜ.ಹಿದಾಯಿ ಜಿಲ್ಬರ್‌ಮನ್‌ ಭಾನುವಾರ ಹೇಳಿದ್ದಾರೆ.

ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿರುವ ಖಾನ್‌ ಯೂನಿಸ್‌ ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಸಿನ್ವರ್‌ ಅಡಗಿರುವ ಸಾಧ್ಯತೆ ಇದೆ. ಹೀಗಾಗಿ ಆ ನಿವಾಸವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅವರು ಮಿಲಿಟರಿ ರೇಡಿಯೊಗೆ ತಿಳಿಸಿದ್ದಾರೆ.

ಸೋಮವಾರದಿಂದ ಉಭಯ ದೇಶಗಳ ನಡುವೆ ಸಂಘರ್ಷ ಆರಂಭಗೊಂಡಿದ್ದು, ಈ ವರೆಗೆ ಸಂಘಟನೆಯ 20 ಜನ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹಮಸ್‌ ಉಗ್ರ ಸಂಘಟನೆ ಹೇಳಿದೆ. ಆದರೆ, ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು