ಇಸ್ರೇಲ್ ಒಡೆತನದ ಸರಕು ಸಾಮಗ್ರಿ ಹಡಗಿನಲ್ಲಿ ನಿಗೂಢ ಸ್ಪೋಟ: ದುರಸ್ತಿಗಾಗಿ ದುಬೈಗೆ

ದುಬೈ: ಒಮನ್ ಕೊಲ್ಲಿಯಲ್ಲಿ ನಿಗೂಢ ಸ್ಫೋಟಕ್ಕೆ ಒಳಗಾಗಿರುವ ಇಸ್ರೇಲ್ ಒಡೆತನದ ಸರಕು ಸಾಮಗ್ರಿ ಸಾಗಿಸುವ ಎಂ.ವಿ.ಹೆಲಿಯೊಸ್ ರೇ ಹಡಗು, ದುರಸ್ತಿಗಾಗಿ ಭಾನುವಾರ ದುಬೈ ಬಂದರಿಗೆ ಬಂದಿದೆ.
ಮಧ್ಯಪ್ರಾಚ್ಯದಿಂದ ಸಿಂಗಪುರದತ್ತ ಹೊರಡುವ ಮೊದಲು ಈ ಹಡಗು ಪರ್ಷಿಯನ್ ಕೊಲ್ಲಿಯ ವಿವಿಧ ಬಂದರುಗಳಲ್ಲಿ ಹಲವು ಕಾರುಗಳನ್ನು ಇಳಿಸಿತ್ತು. ಸೌದಿ ಬಂದರು ದಮ್ಮಮ್‌ನಿಂದ ಹೊರಟಿದ್ದಾಗ ಈ ಸ್ಫೋಟ ಸಂಭವಿಸಿದೆ. ಇದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಹಡಗಿನ ತಪಾಸಣೆ ಮತ್ತು ದುರಸ್ತಿಗಾಗಿ ದುಬೈಗೆ ತರಲಾಗಿದೆ.
ಸ್ಫೋಟದ ಹಿಂದೆ ಇರಾನ್ ಕೈವಾಡವಿದೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಆದರೆ ಈ ಕುರಿತು ಇರಾನ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.