ಗುರುವಾರ , ಅಕ್ಟೋಬರ್ 21, 2021
29 °C

ಕೋವಿಶೀಲ್ಡ್ ಕುರಿತಲ್ಲ, ಲಸಿಕೆ ಪ್ರಮಾಣ ಪತ್ರದ ಬಗ್ಗೆ ನಮ್ಮ ತಕರಾರು ಎಂದ ಬ್ರಿಟನ್

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ‘ಪರಿಷ್ಕೃತ ಪ್ರಯಾಣ ಮಾರ್ಗಸೂಚಿಯ ಪ್ರಕಾರ ‘ಕೋವಿಶೀಲ್ಡ್’ ಲಸಿಕೆಗೆ ಮಾನ್ಯತೆ ನೀಡಲಾಗಿದೆ ನಿಜ. ಆದರೆ, ದೇಶಕ್ಕೆ ಬರುವ ಭಾರತೀಯರು ಎರಡೂ ಡೋಸ್ ಲಸಿಕೆ ಡೋಸ್ ಪಡೆದಿದ್ದರೂ 10 ದಿನಗಳ ಪ್ರತ್ಯೇಕ ವಾಸದಲ್ಲಿ ಇರಬೇಕು’ ಎಂದು ಬ್ರಿಟನ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ತಕರಾರು ಇರುವುದು ಭಾರತದಲ್ಲಿ ನೀಡಲಾಗುವ ಲಸಿಕೆ ಪ್ರಮಾಣ ಪತ್ರದ ಬಗ್ಗೆಯೇ ವಿನಃ ಕೋವಿಶೀಲ್ಡ್ ಲಸಿಕೆ ಕುರಿತಲ್ಲ. ಸಮಸ್ಯೆ ಪರಿಹರಿಸುವ ಬಗ್ಗೆ ಭಾರತ–ಬ್ರಿಟನ್ ಮಾತುಕತೆ ನಡೆಸುತ್ತಿವೆ. ಭಾರತದಲ್ಲಿ ನೀಡುವ ಲಸಿಕೆ ಪ್ರಮಾಣ ಪತ್ರದ ಮಾನ್ಯತೆ ಗುರುತಿಸುವ ವಿಚಾರವಾಗಿ ಆ ದೇಶದ ಜತೆ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಓದಿ: 

ಬ್ರಿಟನ್‌ನ ಪರಿಷ್ಕೃತ ಮಾರ್ಗಸೂಚಿಯು ಅಕ್ಟೋಬರ್ 4ರಿಂದ ಜಾರಿಗೆ ಬರಲಿದೆ. ಇದರ ಪ್ರಕಾರ, ಬ್ರಿಟನ್‌ಗೆ ತೆರಳುವ ಎಲ್ಲ ಭಾರತೀಯರು ಲಸಿಕೆ ಪಡೆಯದವರು ಅನುಸರಿಸುವ ಕ್ರಮವನ್ನೇ ಅನುಸರಿಸಬೇಕಾಗುತ್ತದೆ. ಎರಡೂ ಡೋಸ್ ಲಸಿಕೆ ಡೋಸ್ ಪಡೆದಿದ್ದರೂ 10 ದಿನಗಳ ಪ್ರತ್ಯೇಕ ವಾಸದಲ್ಲಿ ಇರಬೇಕಾಗುತ್ತದೆ.

ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡವರಿಗೆ ಪ್ರತ್ಯೇಕವಾಸ ನಿಯಮ ಕೈಬಿಡದಿದ್ದರೆ ಅದಕ್ಕೆ ತಿರುಗೇಟು ನೀಡುವಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಭಾರತ ಮಂಗಳವಾರ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಪರಿಷ್ಕೃತ ಅಂತರರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಬಿಡುಗಡೆ ಮಾಡಿರುವ ಬ್ರಿಟನ್ ಸರ್ಕಾರವು ‘ಕೋವಿಶೀಲ್ಡ್‌’ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಆದರೆ, ಅನುಮೋದಿತ 17 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಕೈಬಿಟ್ಟಿತ್ತು. ಇದು ಗೊಂದಲಕ್ಕೆ ಕಾರಣವಾಗಿತ್ತು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು