ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧ ಜಯ ಗಳಿಸಲು ಇನ್ನಷ್ಟು ಸಮಯ ಬೇಕು: ಜೋ ಬೈಡನ್

Last Updated 26 ಜನವರಿ 2021, 6:36 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಕೊರೊನಾ ಸೋಂಕು ವಿರುದ್ದದ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸುದೀರ್ಘ ಸಮಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆದ್ಯತೆ ಮೇರೆ ಕಾರ್ಯನಿರತನಾಗಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

‘ಸೋಂಕು ವಿರುದ್ಧ ನಾವು ಜಯಗಳಿಸುತ್ತೇವೆ. ಆದರೆ, ಎರಡೇ ತಿಂಗಳಲ್ಲಿ ಅದನ್ನು ಸಾಧಿಸುತ್ತೇವೆ ಎಂದು ಹೇಳುವುದಿಲ್ಲ. ಇದಕ್ಕೆ ಸಾಕಷ್ಟು ಸಮಯ ಬೇಕು’ ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಹೇಳಿದರು.

ಸೋಂಕು ವಿರುದ್ದದ ಹೋರಾಟ ಕುರಿತಂತೆ ನೀಡಿದ್ದ ಇತ್ತೀಚಿನ ಭಿನ್ನ ಹೇಳಿಕೆಗಳ ಕುರಿತು ಗಮನಸೆಳೆದಾಗ ಅವರು ಈ ಮಾತು ಹೇಳಿದರು. ‘ನನ್ನ ಗ್ರಹಿಕೆ ತಪ್ಪಿದ್ದರೆ ಸರಿಪಡಿಸಿ.ಇದೇ ಮೊದಲ ಬಾರಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಮತ್ತು ಸೋಂಕು ಪೀಡಿತರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಪ್ರತಿಕ್ರಿಯಿಸಿದರು.

ಅಮೆರಿಕದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4.10 ಲಕ್ಷ ಆಗಿದೆ. ಈ ಮೊದಲಿನ ಅಂದಾಜಿನ ಪ್ರಕಾರ 6 ಅಥವಾ 6.6 ಲಕ್ಷ ಇರಬೇಕಿತ್ತು’ ಎಂದು ಉಲ್ಲೇಖಿಸಿದರು.

ಅಮೆರಿಕದಲ್ಲಿ ಕೊರೊನಾ ವಿರುದ್ಧದ ಹೋರಾಟ ಹಾಗೂ ಲಸಿಕೆ ನೀಡುವ ಪ್ರಕ್ರಿಯೆಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT