ಶನಿವಾರ, ಅಕ್ಟೋಬರ್ 31, 2020
27 °C

ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌: ಡೊನಾಲ್ಡ್‌ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೋವಿಡ್‌–19 ಅನ್ನು ‘ಚೀನಾ ವೈರಸ್‌’ ಎಂದೇ ಕರೆಯಬೇಕು ಎಂದು ಚೀನಾದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ಕೊರಾನಾ’ ಶಬ್ದವು ಇಟಲಿಯ ಸುಂದರ ಸ್ಥಳದ ಹೆಸರಿನಂತೆ ಭಾಸವಾಗುತ್ತದೆ ಎಂದಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ನಾನು ಮತ್ತೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಮೆರಿಕವನ್ನು ಉತ್ಪಾದನಾ ಕ್ಷೇತ್ರದಲ್ಲಿ ಮಹಾಶಕ್ತಿಯನ್ನಾಗಿ ಬೆಳೆಸುತ್ತೇನೆ. ಈ ಬಳಿಕ ಚೀನಾದ ಮೇಲೆ ಅಮೆರಿಕ ಅವಲಂಬಿತವಾಗುವ ಅವಶ್ಯಕತೆ ಇರುವುದಿಲ್ಲ’ ಎಂದು ಅವರು ಭರವಸೆ ನೀಡಿದರು.

‘ಕೋವಿಡ್–19‌‌ ಹರಡುವುದಕ್ಕಿಂತ ಮುನ್ನ ಅಮೆರಿಕದ ಆರ್ಥಿಕ ಪ್ರಗತಿ ಉತ್ತಮವಾಗಿತ್ತು. ಈ ವೈರಸ್‌ ಹರಡಲು ಚೀನಾವೇ ಕಾರಣ. ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌’ ಎಂದು ಅವರು ಕಿಡಿಕಾರಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು