ನವದೆಹಲಿ: ದೀರ್ಘಕಾಲದ ಕೋರಿಕೆಯ ಮೇರೆಗೆ 17ನೇ ಶತಮಾನದ ಜಾರ್ಜಿಯಾ ರಾಣಿ, ಸೈಂಟ್ ಕೆಟೆವನ್ ಅವರ ಪವಿತ್ರ ಪಳೆಯುಳಿಕೆಯನ್ನು ಭಾರತ ಜಾರ್ಜಿಯಾಕ್ಕೆ ಹಸ್ತಾಂತರಿಸಿದೆ.

16 ವರ್ಷಗಳ ಹಿಂದೆಗೋವಾದಲ್ಲಿ ಪತ್ತೆಯಾಗಿರುವ ಪಳೆಯುಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಸ್ತಾಂತರಿಸಿದರು. ಈ ಮೂಲಕ ದ್ವಿಪಕ್ಷೀಯ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದರು.

ಇದನ್ನೂ ಓದಿ:ಲಾಸ್ ಏಂಜಲೀಸ್ನ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಅಮೆರಿಕದ ರಾಯಭಾರಿ

ಪೂರ್ವ ಯುರೋಪ್ ಹಾಗೂ ಪಶ್ಚಿಮ ಏಷ್ಯಾದಸಂಧಿಸ್ಥಾನದಲ್ಲಿರುವಜಾರ್ಜಿಯಾಕ್ಕೆ ಜೈಶಂಕರ್ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.

ಜಾರ್ಜಿಯಾದ ಪ್ರಧಾನಿ ಇರಾಕ್ಲಿ ಗರಿಬಾಶ್ವಿಲಿ ಹಾಗೂ ಕ್ಯಾಥೊಲಿಕ್ ಧರ್ಮಗುರು ಬೀಟಿಟ್ಯೂಡ್ ಇಲಿಯಾ II ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೂಜಾರ್ಹವೆಂದು ರಕ್ಷಿಸಲ್ಪಟ್ಟ ಪವಿತ್ರ ಪಳೆಯುಳಿಕೆ ಹಸ್ತಾಂತರಿಸಿದರು.

17ನೇ ಶತಮಾನದ ಜಾರ್ಜಿಯಾ ರಾಣಿ ಆಗಿರುವ ಸೈಂಟ್ ಕೆಟೆವನ್ ಅವರ ಪಳೆಯುಳಿಕೆ 2005ರಲ್ಲಿ ಗೋವಾದಲ್ಲಿ ಪತ್ತೆಯಾಗಿತ್ತು. 1627ರಲ್ಲಿ ಗೋವಾದ ಸೈಂಟ್ ಆಗಸ್ಟೀನ್ ಕಾಂಪ್ಲೆಕ್ಸ್‌ನಲ್ಲಿ ಸಮಾಧಿ ಮಾಡಲಾಗಿತ್ತು ಎಂದು ಪೋರ್ಚುಗೀಸ್ ದಾಖಲೆಗಳು ಉಲ್ಲೇಖಿಸುತ್ತವೆ.

2017ರಲ್ಲಿ ಜಾರ್ಜಿಯಾದ ಕೋರಿಕೆಯ ಮೇರೆಗೆ ಆರು ತಿಂಗಳುಗಳ ಕಾಲ ಪಳೆಯುಳಿಕೆಯ ಪ್ರದರ್ಶನಕ್ಕಾಗಿ ಭಾರತ ರವಾನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.