ಮಂಗಳವಾರ, ಅಕ್ಟೋಬರ್ 26, 2021
20 °C

ಗರ್ಭಪಾತ ನಿಷೇಧಿಸುವ ಟೆಕ್ಸಾಸ್‌ ಕಾಯ್ದೆಗೆ ತಡೆ ನೀಡಲು ಬೈಡನ್‌ ಸರ್ಕಾರ ಒತ್ತಾಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಆಸ್ಟಿನ್‌, ಅಮೆರಿಕ: ಗರ್ಭಪಾತ ಹಕ್ಕನ್ನು ನಿರ್ಬಂಧಿಸುವ ಟೆಕ್ಸಾಸ್‌ನ ಕಠಿಣ ಕಾನೂನಿಗೆ ತಡೆ ನೀಡಬೇಕು ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರವು ಶುಕ್ರವಾರ ಫೆಡರಲ್‌ ಕೋರ್ಟ್‌ನ ನ್ಯಾಯಾಧೀಶರನ್ನು ಒತ್ತಾಯಿಸಿದೆ.

ಸೆಪ್ಟೆಂಬರ್‌ ಆರಂಭದಲ್ಲಿ ಈ ಕಾಯ್ದೆ ಜಾರಿಯಾಗಿದ್ದು, ಗರ್ಭಪಾತವನ್ನು ನಿರ್ಬಂಧಿಸಲಾಗಿದೆ. ಗರ್ಭಪಾತ ಕಾನೂನನ್ನೂ ತಡೆಹಿಡಿದರೂ ಟೆಕ್ಸಾಸ್‌ನಲ್ಲಿ ಗರ್ಭಪಾತಕ್ಕೆ ನೆರವಾಗುವ ಸೇವೆಗಳು ಕೂಡಲೇ ಪ್ರಾರಂಭವಾಗುವುದಿಲ್ಲ ಎನ್ನಲಾಗಿದೆ. ಕಾಯ್ದೆ ಪರಿಣಾಮ ಎದುರಿಸಬೇಕಾದಿತು ಎಂಬ ವೈದ್ಯರ ಆತಂಕ ಇದಕ್ಕೆ ಕಾರಣ ಎನ್ನಲಾಗಿದೆ.

ಓದಿ: 

ಭ್ರೂಣದಲ್ಲಿ ಹೃದಯಚಟುವಟಿಕೆ ಪತ್ತೆಯಾದ ಬಳಿಕ ಗರ್ಭಪಾತ ನಡೆಸುವುದನ್ನು ಉಲ್ಲೇಖಿತ ಕಾಯ್ದೆ ನಿಷೇಧಿಸಲಿದೆ. ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ಖಾಸಗಿಯವರು ಮೊಕದ್ದಮೆ ಹೂಡಲು ಅವಕಾಶವಿದೆ. ಆರೋಪ ಸಾಬೀತಾದರೆ 10 ಸಾವಿರ ಅಮೆರಿಕ ಡಾಲರ್‌ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗರ್ಭಪಾತ ಕುರಿತಂತೆ ಮಹಿಳೆಯರ ಸಾಂವಿಧಾನಿಕ ಹಕ್ಕಿನ ಮೇಲೆ ಈ ಕಾಯ್ದೆಯ ಮೂಲಕ ಟೆಕ್ಸಾಸ್‌ ದಾಳಿ ನಡೆಸಿದೆ ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿದೆ.

‘ಒಂದು ರಾಜ್ಯ ಆರು ವಾರಗಳವರೆಗೆ ಗರ್ಭಪಾತದ ಹಕ್ಕನ್ನು ನಿಷೇಧಿಸಬಾರದು. ಇದು ತಿಳಿದಿದ್ದರೂ ಟೆಕ್ಸಾಸ್‌  ಕಾನೂನು ರೂಪಿಸಿದೆ’ ಎಂದು ನ್ಯಾಯಾಂಗ ಇಲಾಖೆಯ ವಕೀಲ ಅಟಾರ್ನಿ ಬ್ರಿಯಾನ್‌ ನೆಟ್ಟರ್‌ ಅವರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು