ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಘಟ್ಟದತ್ತ ಅಮೆರಿಕ ಚುನಾವಣೆ

ಆರಂಭಿಕ ಫಲಿತಾಂಶದಲ್ಲಿ ಜೋ ಬೈಡನ್ ಮುನ್ನಡೆ, ಟ್ರಂಪ್ ತುರುಸಿನ ಸ್ಪರ್ಧೆ
Last Updated 4 ನವೆಂಬರ್ 2020, 6:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಮುನ್ನಡೆ ಸಾಧಿಸಿದ್ದರೆ, ಪುನರಾಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದು, ತೀವ್ರ ಹಣಾಹಣಿ ನಡೆದಿದೆ. ತುರುಸಿನ ಸ್ಪರ್ಧೆಯಿಂದಾಗಿ ಫಲಿತಾಂಶ ಕುತೂಹಲ ಕೆರಳಿಸುತ್ತಿದೆ.

ಫಾಕ್ಸ್‌ ನ್ಯೂಸ್ ವರದಿಯ ಪ್ರಕಾರ, ಬೈಡನ್‌ ಅವರು ಒಟ್ಟು 537 ಸ್ಥಾನಗಳ ಪೈಕಿ ಇದುವರೆವಿಗೂ 207ರಲ್ಲಿ ಮುನ್ನಡೆಯಲಿದ್ದರೆ, ಟ್ರಂಪ್ ಅವರು 148ರಲ್ಲಿ ಮುಂದಿದ್ದಾರೆ. ಇನ್ನೊಂದೆಡೆಸಿಎನ್‌ಎನ್ ಸಂಸ್ಥೆಯು ಬೈಡನ್ 192 ಮತ್ತು ಟ್ರಂಪ್ 108 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಆನುಸಾರ ಬೈಡನ್‌ ಅವರು 133 ಹಾಗೂ ಟ್ರಂಪ್ ಅವರು 115 ಸ್ಥಾನಗಳಲ್ಲಿ ಮುಂದಿದ್ದಾರೆ. ಗೆಲುವಿನ ಗುರಿ ಮುಟ್ಟಲು ಒಟ್ಟು 270 ಸ್ಥಾನ ಗೆಲ್ಲುವುದು ಅಗತ್ಯವಾಗಿದೆ.

ನಿರ್ಣಾಯಕ ಎನ್ನಲಾದ ಫ್ಲಾರಿಡಾ, ಉತ್ತರ ಕರೊಲಿನಾ, ಒಹಿಯೊ, ಪೆನ್ಸಿಲ್ವೇನಿಯಾ, ವಿಸ್ಕಸಿನ್‌ ಮತ್ತು ಮಿಚಿಗನ್‌ನಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಬೈಡನ್ ಅವರು ಅರಿಜೋನಾ ಮತ್ತು ಮಿನಿಯಾಪೊಲೀಸ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಫ್ಲಾರಿಡಾದಲ್ಲಿ ಬೈಡನ್ ಅವರು ಕೈಗೊಂಡಿದ್ದ ಅಬ್ಬರದ ಪ್ರಚಾರ ನಿರೀಕ್ಷಿತ ಫಲ ನೀಡಿಲ್ಲ. ಫ್ಲಾರಿಡಾ ವ್ಯಾಪ್ತಿಯಲ್ಲಿ ಒಟ್ಟು 29 ಮತಕ್ಷೇತ್ರಗಳಿವೆ. ‘ಫ್ಲಾರಿಡಾದ್ದು ಮುಗಿದ ಕಥೆ. ಅಲ್ಲಿ ನಾವು ಗೆಲ್ಲುವುದಿಲ್ಲ ಎಂದು ನಾನು ಹೇಳಿದ್ದೆ. ಅದೀಗ ನಿಜವಾಗಿದೆ‌’ ಎಂದು ಪ್ರಚಾರಕೊಬ್ಬರು ತಿಳಿಸಿದರು.

ಆಶ್ಚರ್ಯವೆಂಬಂತೆ ಟ್ರಂಪ್‌ ಅವರು ವರ್ಜಿನಿಯಾದಲ್ಲಿ ಶೇ 7ರಷ್ಟು ಪಾಯಿಂಟ್‌ಗಳಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ, ಡೆಮಾಕ್ರಟಿಕ್ ಪ್ರಾಬಲ್ಯ ಹೊಂದಿದೆ ಎಂದು ಅಂದಾಜು ಮಾಡಲಾಗಿತ್ತು.

ಫೈವ್‌ಥರ್ಟಿಎಯ್ಟ್ ಡಾಟ್ ಕಾಂ ಈ ಮೊದಲ, ಬೈಡನ್‌ ದೊಡ್ಡ ಪ್ರಮಾಣದಲ್ಲಿ ಜಯಗಳಿಸಬಹುದು ಎಂದು ವ್ಯಾಖ್ಯಾನಿಸಿದ್ದರೂ, ಬಳಿಕ ಟ್ರಂಪ್ ಅವರು ಈ ಭಾಗದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಹೇಳಿದೆ.

ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರಮುಖ ಘಟ್ಟವಾದ ಮತಗಳ ಎಣಿಕೆ ಪ್ರಕ್ರಿಯೆ ಮಂಗಳವಾರ ಆರಂಭವಾಯಿತು.

ಈ ನಡುವೆ, ಆರಂಭಿಕ ಹಂತದ ಫಲಿತಾಂಶ ಕುರಿತು ಸಂಭ್ರಮ ವ್ಯಕ್ತಪಡಿಸಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ‘ನಿಜವಾಗಿ ಉತ್ತಮ ಫಲಿತಾಂಶ ಬರುತ್ತಿದೆ. ಥ್ಯಾಂಕ್ಯೂ’ ಎಂದಿದ್ದಾರೆ.

‘ನಿಮ್ಮ ಸರದಿಗಾಗಿ ಕಾಯುತ್ತಿರಿ. ಗೆಳೆಯರೇ’ ಎಂದು ಟ್ರಂಪ್ ಪ್ರತಿಸ್ಪರ್ಧಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಹಾಗೂ ಇದೇ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಟ್ವೀಟ್ ಮಾಡಿದ್ದಾರೆ.

ಪರಿಣತರ ಪ್ರಕಾರ, ಉತ್ತರ ಕರೋಲಿನಾ, ಒಹಿಯೊ, ಪೆನ್ಸಿಲ್ವೇನಿಯಾ ಭಾಗದ ಫಲಿತಾಂಶ ಒಟ್ಟು ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT