ಗುರುವಾರ , ಜನವರಿ 28, 2021
18 °C

ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಹುದ್ದೆಗೆ ಜೆನ್‌ ಹೆಸರು ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡನ್‌ ಅವರು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಸ್ಥಾನಕ್ಕೆ ಜೆನ್‌ ಸಕಿ ಅವರ ಹೆಸರನ್ನು ಘೋಷಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಬೈಡನ್‌ ಹಾಗೂ ಕಮಲಾ ಹ್ಯಾರಿಸ್‌ ಅವರು ಪ್ರಚಾರ ಕಾರ್ಯ ತಂಡದ ಉಪ ವ್ಯವಸ್ಥಾಪಕಿಯಾಗಿದ್ದ ಕೇಟ್‌ ಬೆಡಿಂಗ್‌ಫೀಲ್ಡ್‌ ಅವರನ್ನು ಶ್ವೇತ ಭವನದ ಸಂವಹನ ವಿಭಾಗದ ನಿರ್ದೇಶಕಿಯನ್ನಾಗಿ ಘೋಷಿಸಲಾಗಿದೆ.

ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಹುದ್ದೆಗೆ ಕರೀನ್‌ ಜೀನ್‌ ಪಿಯರಿ, ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಹಿರಿಯ ಸಲಹೆಗಾರ್ತಿ ಹಾಗೂ ಮುಖ್ಯ ವಕ್ತಾರರ ಹುದ್ದೆಗೆ ಸಿಮೋನ್‌ ಸ್ಯಾಂಡರ್ಸ್ ಅವರ ಹೆಸರನ್ನು ಘೋಷಿಸಲಾಗಿದೆ.

ಇದರೊಂದಿಗೆ ಬೈಡನ್‌ ಅವರು ತಮ್ಮ ಆಡಳಿತದ ಸಂವಹನ ವಿಭಾಗದಲ್ಲಿ ಎಲ್ಲರೂ ಮಹಿಳೆಯರನ್ನೇ ನೇಮಕ ಮಾಡಿದಂತಾಗಲಿದೆ.

ಪ್ರಥಮ ಮಹಿಳೆಯ (ಬೈಡನ್‌ ಪತ್ನಿ) ಸಂವಹನ ನಿರ್ದೇಶಕಿಯಾಗಿ ಎಲಿಜಬೆತ್ ಇ.ಅಲೆಕ್ಸಾಂಡರ್‌, ಶ್ವೇತ ಭವನದ ಉಪಸಂವಹನ ನಿರ್ದೇಶಕಿಯಾಗಿ ಪಿಲಿ ಟೋಬರ್‌, ನಿಯೋಜಿತ ಉಪಾಧ್ಯಕ್ಷೆಯ ಸಂವಹನ ನಿರ್ದೇಶಕಿಯಾಗಿ ಆ್ಯಶ್ಲೆ ಎಟಿನಿ ಅವರನ್ನು ನೇಮಕ ಮಾಡುವುದಾಗಿಯೂ ಘೋಷಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು