ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ವರ್ಚುವಲ್ ಮೂಲಕ ಜಾಗತಿಕ ಹವಾಮಾನ ಶೃಂಗಸಭೆ ಕರೆದಿದ್ದು, ಹಸಿರುಮನೆ ಪರಿಣಾಮವನ್ನು ತಗ್ಗಿಸುವ ಸಲುವಾಗಿ ಅತ್ಯಂತ ಜಟಿಲವಾದ ಮಾಲಿನ್ಯ ಪ್ರಮಾಣದ ಗುರಿ ನಿಗದಿಪಡಿಸುವ ಒತ್ತಡದಲ್ಲಿದ್ದಾರೆ.

ಜಗತ್ತು ಇಂದು ಎದುರು ನೋಡುತ್ತಿರುವ ಪ್ರಮುಖ ವಿಷಯ ಮಾಲಿನ್ಯ ಗುರಿ ನಿಗದಿಯಾಗಿದ್ದು, ಹವಾಮಾನ ಬದಲಾವಣೆ ವಿಷಯದಲ್ಲಿ ಬೈಡನ್ ಅವರು ಎಷ್ಟರ ಮಟ್ಟಿಗೆ ತೀವ್ರಗಾಮಿಯಾಗಿದ್ದಾರೆ ಎಬುದನ್ನು ಇದು ನಿರ್ಧರಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

2030ರ ವೇಳೆಗೆ 2005ರ ಮೊದಲಿದ್ದ ಮಾಲಿನ್ಯದ ಮಟ್ಟಕ್ಕೆ ಮಾಲಿನ್ಯ ಪ್ರಮಾಣವನ್ನು ಇಳಿಸಬೇಕಾದರೆ ಅದಕ್ಕೊಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಲೇಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗೆ ಮಾಡಬೇಕಿದ್ದರೆ ಅಮೆರಿಕದ ಇಂಧನ ಮತ್ತು ಸಾರಿಗೆ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆಗಳನ್ನು ತರಬೇಕಾಗುತ್ತದೆ, ದಹನ ಇಂಧನ ಬದಲಿಗೆ ನವೀಕರಿಸಬಹುದಾದ ಇಂಧನಗಳತ್ತ ಹೊರಳುವುದು ಅಗತ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ... ಮ್ಯಾನ್ಮಾರ್ನಲ್ಲಿ ಜಪಾನ್ ಪತ್ರಕರ್ತನ ಬಂಧನ: ಬಿಡುಗಡೆ ಮಾಡುವಂತೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.