ಮಂಗಳವಾರ, ನವೆಂಬರ್ 24, 2020
21 °C

ಅಮೆರಿಕ ಚುನಾವಣೆ: ನ್ಯೂಜೆರ್ಸಿ, ನ್ಯೂಯಾರ್ಕ್: ಬೈಡನ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡೆನ್ ಅವರು ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನಲ್ಲಿ ಜಯಗಳಿಸಿದ್ದರೆ, ಇವರ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಇತರೆ ಪ್ರಮುಖ ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಬೈಡೆನ್ ಅವರು 2.2 ಮಿಲಿಯನ್‌ ಮತ ಹಾಗೂ ಟ್ರಂಪ್ 1.2 ಮಿಲಿಯನ್‌ ಮತಗಳನ್ನು ಗಳಿಸಿದ್ದಾರೆ. ಜೋ ಬೈಡನ್ ಅವರು ಕೊಲೊರಾಡೊ, ಕನೆಕ್ಟಿಕಟ್, ಇಲಿನಾಯ್ಸ್‌, ಮಸಾಚುಸೆಟ್ಸ್, ನ್ಯೂ ಮೆಕ್ಸಿಕೊ, ವೆರ್ಮೊಂಟ್‌, ವರ್ಜಿನಿಯಾದಲ್ಲಿ ಮುನ್ನಡೆ ಸಾಧಿಸಿದ್ದಾರೆ.

‌ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲಬಮಾ, ಅರ್ಕನಸ್, ಕೆಂಟುಕಿ, ಲೂಸಿಯಾನಾ, ಮಿಸ್ಸಿಸ್ಸಿಪ್ಪಿ, ನೆಬ್ರಾಸ್ಕಾ,   ಒಕ್ಲಾಹಾಮಾ, ಟೆನ್ನೆಸಿ, ಪಶ್ಚಿಮ ವರ್ಜೀನಿಯಾ, ಇಂಡಿಯಾನಾ, ದಕ್ಷಿಣ ಕರೊಲಿನಾದಲ್ಲಿ ಗೆದಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತೆಯೇ ಜನರು 2020ರ ಅಧ್ಯಕ್ಷ ಸ್ಥಾನದ ಫಲಿತಾಂಶವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಕೊರೊನಾ ಸೋಂಕು ಪರಿಸ್ಥಿತಿಯ ನಡುವೆಯೂ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ.

ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಗಿಜಿಗಿಡುತ್ತಿದ್ದ ಟೈಮ್ಸ್ ಸ್ಕ್ವೇರ್‌ನಲ್ಲಿ  ನೀರಸ ವಾತಾವರಣವಿತ್ತು. ಉಭಯ ಪಕ್ಷಗಳ ಬೆಂಬಲಿಗರು, ಮಾಧ್ಯಮ ಪ್ರತಿನಿಧಿಗಳು ಟೈಮ್ಸ್‌ ಸ್ಕ್ವೇರ್‌ನಲ್ಲಿ ಸೇರುತ್ತಿದ್ದರು. ಈ ಬಾರಿ ಅಂಥ ವಾತಾವರಣವಿಲ್ಲ.

ಇದನ್ನೂ ಓದಿ: US Election Result 2020: ಟ್ರಂಪ್ - ಬೈಡೆನ್ ಮಧ್ಯೆ ಅಲ್ಪ ಅಂತರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು