ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಗಂಟೆ ಕದನವಿರಾಮ: ರಷ್ಯಾದ ಕಾರ್ಯತಂತ್ರ ಎಂದ ಉಕ್ರೇನ್‌

Last Updated 6 ಜನವರಿ 2023, 11:21 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನಲ್ಲಿ ಇರುವ ತನ್ನ ಸೇನೆಗೆ 36 ಗಂಟೆಗಳ ಕಾಲ ಕದನವಿರಾಮ ಪಾಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಆದೇಶಿಸಿರುವುದು ಕಾರ್ಯತಂತ್ರ ಎಂದು ಉಕ್ರೇನ್ ಅಧಿಕಾರಿಗಳು ಶಂಕಿಸಿದ್ದಾರೆ.

ಅದರೆ, ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ಕದನವಿರಾಮ ಘೋಷಿಸಲಿದೆಯೇ ಎಂದು ಖಚಿತ ಪಡಿಸಿಲ್ಲ. ಇನ್ನೊಂದೆಡೆ, ರಷ್ಯಾ ಕೂಡ ಈ ಅವಧಿಯಲ್ಲಿ ಉಕ್ರೇನ್ ದಾಳಿ ನಡೆಸಿದರೆ ಪ್ರತ್ಯುತ್ತರ ನೀಡಲಿದೆಯೇ ಎಂದು ಸ್ಪಷ್ಟಪಡಿಸಿಲ್ಲ.

ಯುದ್ಧ ಆರಂಭವಾದ 11 ತಿಂಗಳ ತರುವಾಯ ರಷ್ಯಾ ಇದೇ ಮೊದಲ ಬಾರಿಗೆ ಕದನವಿರಾಮವನ್ನು ಘೋಷಿಸಿದೆ. ಶುಕ್ರವಾರ ಮಧ್ಯಾಹ್ನ ಆರಂಭವಾಗುವ ಕದನವಿರಾಮ ಶನಿವಾರ ಮಧ್ಯರಾತ್ರಿಯವರೆಗೂ ಚಾಲ್ತಿಯಲ್ಲಿರಲಿದೆ.

1,100 ಕಿ.ಮೀ ಅಂತರದ ಗಡಿಯುದ್ಧಕ್ಕೂ ರಷ್ಯಾದ ಸೇನೆ ಈ ಅವಧಿಯಲ್ಲಿ ಸಂಘರ್ಷವನ್ನು ನಿಲ್ಲಿಸಲಿದೆ ಎಂದು ಪುಟಿನ್ ಹೇಳಿದ್ದರು. ರಷ್ಯಾದ ಚರ್ಚ್‌ವೊಂದರ ಮುಖ್ಯಸ್ಥರಾದ ಪ್ಯಾಟ್ರಿಯಾರ್ಚ್ ಕಿರಿಲ್‌ ಅವರಿ ಈ ಪ್ರಸ್ತಾಪ ಮುಂದಿಟ್ಟಿದ್ದರು. ಜುಲಿಯನ್‌ನ ಕ್ಯಾಲೆಂಡರ್‌ನಂತೆ, ಈ ಚರ್ಚ್‌ನಲ್ಲಿ ಜ.7ರಂದು ಕ್ರಿಸ್‌ಮಸ್‌ ಆಚರಿಸಲಾಗುತ್ತದೆ.

ಕದನವಿರಾಮವನ್ನು ಘೋಷಿಸುವ ರಷ್ಯಾದ ಉದ್ದೇಶವನ್ನೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರಶ್ನಿಸಿದ್ದಾರೆ. ತೀವ್ರ ದಾಳಿ ನಡೆಸಲು ಸದ್ಯ ತಾತ್ಕಾಲಿಕ ವಿರಾಮ ಘೋಷಿಸಲಾಗಿದೆ ಎಂದು ಹೇಳಿದರು.

ಈಗ ರಷ್ಯಾ ಕ್ರಿಸ್‌ಮಸ್‌ನ ನೆಪ ನೀಡುತ್ತಿದ್ದು, ಈ ಅವಧಿಯಲ್ಲಿ ನಮ್ಮ ನೆಲೆಯ ಸಮೀಪ ಸೇನೆ ನಿಯೋಜಿಸಲು ಸಂಚು ನಡೆಸುತ್ತಿದೆ ಎಂದರು. ಆದರೆ, ರಷ್ಯಾದ ಮನವಿ ಪುರಸ್ಕರಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ.

ಉಕ್ರೇನ್‌ಗೆ ಹೆಚ್ಚಿನ ನೆರವು: ಅಮೆರಿಕ, ಜರ್ಮನ್‌ ನಿರ್ಧಾರ
ವಾಷಿಂಗ್ಟನ್
(ಪಿಟಿಐ): ಉಕ್ರೇನ್‌ನಲ್ಲಿ ಯುದ್ಧ ಈಗ ನಿರ್ಣಾಯಕ ಘಟ್ಟವನ್ನು ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಅಮೆರಿಕ ಮತ್ತು ಜರ್ಮನಿ ಇದೇ ವೇಳೆ ಹೆಚ್ಚುವರಿ ನೆರವನ್ನೂ ಘೋಷಿಸಿವೆ.

ರಷ್ಯಾದ ಅತಿಕ್ರಮಣ ತಡೆಯಲು ಈ ನಿರ್ಣಾಯಕ ಘಟ್ಟದಲ್ಲಿ ನಾವು ಎಲ್ಲ ನೆರವನ್ನೂ ನೀಡಬೇಕಿದೆ. ರಷ್ಯಾ ಈಗಲೂ ತೀವ್ರ ದಾಳಿ ನಡೆಸುತ್ತಿದೆ ಎಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಹೇಳಿದರು.

ಉಕ್ರೇನ್ ಯುದ್ಧ ಕುರಿತಂತೆ ಮುಂದೇನು ಮಾಡಬೇಕು ಎಂದು ಜರ್ಮನ್‌ನ ಚಾನ್ಸಲರ್‌ ಜೊತೆಗೆ ಚರ್ಚಿಸಲಾಗಿದೆ. ವಾಯುದಾಳಿ ಎದುರಿಸಲು ಅಗತ್ಯವಾದ ಶಸ್ತ್ರಾಸ್ತ್ರ ಒದಗಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT