ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತ್‌ ಮೋದಿಗೆ ಅನಾರೋಗ್ಯ: ಜೀವ ರಕ್ಷಕ ಸಾಧನದ ಬೆಂಬಲದಲ್ಲಿ IPL ಮಾಜಿ ಅಧ್ಯಕ್ಷ

ಏರ್ ಆ್ಯಂಬುಲೆನ್ಸ್‌ನಲ್ಲಿ ಮೆಕ್ಸಿಕೋದಿಂದ ಲಂಡನ್‌ಗೆ ಬಂದ ಲಲಿತ್‌ ಮೋದಿ
Last Updated 14 ಜನವರಿ 2023, 6:28 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್‌ನ ಮಾಜಿ ಅಧ್ಯಕ್ಷ, ಭಾರತದಿಂದ ಪರಾರಿಯಾಗಿ ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋವಿಡ್‌ ಹಾಗೂ ನ್ಯುಮೋನಿಯಾಗೆ ತುತ್ತಾಗಿರುವ ಅವರು ಜೀವರಕ್ಷಕ ಸಾಧನದ ಬೆಂಬಲದಲ್ಲಿದ್ದಾರೆ.

ಖುದ್ದು ಅವರೇ ತಮ್ಮ ಅನಾರೋಗ್ಯದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಎರಡು ವಾರದಲ್ಲಿ ಎರಡು ಬಾರಿ ಕೋವಿಡ್‌ಗೆ ತುತ್ತಾದೆ. ಆಸ್ಪತ್ರೆಗೆ ದಾಖಲಾಗದ ಬಳಿಕ ಗಂಭೀರ ನ್ಯುಮೋನಿಯಾ ಬಾಧಿಸಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

‘ಎರಡು ವಾರಗಳಲ್ಲಿ 2 ಬಾರಿ ಕೋವಿಡ್‌ಗೆ ತುತ್ತಾಗಿ 3 ವಾರಗಳ ಬಂಧನದ ಬಳಿಕ ಈಗ ಗಂಭೀರ ನ್ಯುಮೋನಿಯಾ ಜತೆಯಾಗಿದೆ. ಇಬ್ಬರು ವೈದ್ಯರ ಜತೆಗೆ ಕೊನೆಗೂ ಏರ್‌ ಆ್ಯಂಬುಲೆನ್ಸ್‌ ಮೂಲಕ ಬಂದಿಳಿದೆ. ಪ್ರಯಾಣ ಸುಖಕಾರವಾಗಿತ್ತು. ಆದರೆ ಈಗಲೂ 24/7 ಆಮ್ಲಜನಕದ ಬೆಂಬಲದೊಂದಿದೆ ಇದ್ದೇನೆ‘ ಎಂದು ಅವರು ಬರೆದುಕೊಂಡಿದ್ದಾರೆ.

ಮೆಕ್ಸಿಕೋದಲ್ಲಿ ಅವರು ಕೋವಿಡ್‌ಗೆ ತುತ್ತಾಗಿದ್ದು, ಅಲ್ಲಿಂದ ಲಂಡನ್‌ಗೆ ಏರ್‌ ಆ್ಯಂಬುಲೆನ್ಸ್‌ ಮೂಲಕ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT