ಶನಿವಾರ, ಮೇ 28, 2022
31 °C

ಮ್ಯಾನ್ಮಾರ್: ಗಣಿ ಭೂಕುಸಿತ,1 ಸಾವು, 70 ಮಂದಿ ನಾಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್: ಉತ್ತರ ಮ್ಯಾನ್ಮಾರ್‌ನ ಕಚಿನ್‌ ರಾಜ್ಯದ ಪಕಂತ್‌ನ ಗಣಿಯಲ್ಲಿ ಬುಧವಾರ ಭೂಕುಸಿತವಾಗಿದ್ದು, 70 ಮಂದಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧಕಾರ್ಯ ನಡೆದಿದೆ.

ಗಯುನಾರ್‌ ರಕ್ಷಣಾ ತಂಡದ ನ್ಯೊ ಚಾ ಅವರು, ‘ಶೋಧ ಕಾರ್ಯ ನಡೆದಿದೆ. ಅಕ್ಕಪಕ್ಕದ ಗಣಿಗಳ ಮಣ್ಣು, ತ್ಯಾಜ್ಯ 60 ಮೀಟರ್‌ನಷ್ಟು ಕುಸಿದಿದೆ. ಐವರು ಮಹಿಳೆಯರು ಮಣ್ಣಿನೊಳಗೆ ಸಿಲುಕಿದ್ದರು. ಒಬ್ಬನ ಶವವನ್ನು ತೆಗೆಯಲಾಗಿದೆ' ಎಂದು ತಿಳಿಸಿದ್ದಾರೆ.

ರಕ್ಷಣಾ ಮತ್ತು ಅಗ್ನಿಶಾಮಕ ಸೇವೆಯ 150 ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಇದು ಕಚಿನ್‌ ರಾಜ್ಯದ ದುರ್ಗಮ ಸ್ಥಳವಾಗಿದೆ. ಮ್ಯಾನ್ಮಾರ್‌ನ ದೊಡ್ಡ ನಗರ ಯಾಂಗಾನ್‌ನಿಂದ 950 ಕಿ.ಮೀ. ದೂರದಲ್ಲಿದೆ. ಅಪರೂಪದ, ಮೌಲ್ಯಯುತ ಕಲ್ಲುಗಳ ನಿಕ್ಷೇಪ ಇಲ್ಲಿದೆ. 

ಪಕಂತ್‌ ಪ್ರದೇಶದಲ್ಲಿರುವ ಗಣಿಯು ದುಬಾರಿ ಮೌಲ್ಯದ ಕಲ್ಲುಗಳ ಗಣಿಗಾರಿಕೆ ನಡೆಯುವ ಅತ್ಯಂತ ದೊಡ್ಡ ಗಣಿ. ಇದು, ಮ್ಯಾನ್ಮಾರ್ ಸೇನೆ ಮತ್ತು ಗೊರಿಲ್ಲಾ ಪಡೆಗಳ ನಡುವೆ ತೀವ್ರ ಘರ್ಷಣೆಯು ನಡೆದಿದ್ದ ಸ್ಥಳವೂ ಹೌದು.

ಸುರಕ್ಷತೆ ಕ್ರಮವಹಿಸಿಲ್ಲ ಎಂದು ಸ್ಥಳೀಯ ಆಡಳಿತವು ಅನೇಕ ಗಣಿಗಳ ಲೈಸೆನ್ಸ್‌ ರದ್ದುಪಡಿಸಿತ್ತು. ಅಸುರಕ್ಷತೆ ನಡುವೆಯೇ ಗಣಿಗಾರಿಕೆ ಮುಂದುವರಿದಿದೆ. ಭೂಕುಸಿತದಿಂದಾಗಿ 2020ರ ಜುಲೈನಲ್ಲಿ 162 ಹಾಗೂ 2015ರ ನವೆಂಬರ್‌ನಲ್ಲಿ 113 ಮಂದಿ ಮೃತಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು