ಶುಕ್ರವಾರ, ಅಕ್ಟೋಬರ್ 22, 2021
29 °C

ಮಹಾತ್ಮಗಾಂಧಿಯ ಶಾಂತಿ ಸಂದೇಶ ಪಾಲಿಸುವಂತೆ ಆಂಟೊನಿಯೊ ಗುಟೆರಸ್‌ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಮಹಾತ್ಮಗಾಂಧಿಯ ಶಾಂತಿಯ ಸಂದೇಶವನ್ನು ಅನುಸರಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಕರೆ ನೀಡಿದ್ದಾರೆ.

ವಿಶ್ವದಾದ್ಯಂತ ಎಲ್ಲರೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮಾನವೀಯತೆಯ ಸಮಾನ ಶತ್ರುವಾಗಿರುವ ಕೋವಿಡ್‌ ಪಿಡುಗನ್ನು ಸೋಲಿಸಲು ಗಮನ ಹರಿಸಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ. 

ಗಾಂಧಿ ಜಯಂತಿ ನಿಮಿತ್ತ ಅಂತರರಾಷ್ಟ್ರೀಯ ಅಹಿಂಸಾ ದಿನದ ಸಂದೇಶ ನೀಡಿರುವ ಗುಟೆರಸ್‌, ‘ಗಾಂಧೀಜಿಯವರ ಜನ್ಮದಿನದಂದು ಅಹಿಂಸಾ ದಿನವಾಗಿ ಆಚರಿಸುವುದು ಕಾಕತಾಳೀಯವಲ್ಲ. ಗಾಂಧೀಜಿ ಅವರಿಗೆ ಶಾಂತಿಯುತ ಪ್ರತಿಭಟನೆ, ಘನತೆ, ಸಮಾನತೆ ಮುಖ್ಯವಾಗಿದ್ದವು. ಮಾನವೀಯತೆಗೆ ಬೆಳಕು ನೀಡಿ, ಉತ್ತಮ ಭವಿಷ್ಯದ ಮಾರ್ಗ ತೋರಿದರು’ ಎಂದರು.

‘ಸಂಘರ್ಷಗಳು, ಹವಾಮಾನ ವೈಪರೀತ್ಯ, ಬಡತನ, ಅಸಮಾನತೆ, ಅಪನಂಬಿಕೆಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇನ್ನೂ ಹೆಚ್ಚಾಗಿವೆ. ಇವು ಜನರ ಸ್ಥಿತಿ, ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡುವುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು