ಸೋಮವಾರ, ಮೇ 10, 2021
27 °C

ಅಫ್ಗಾನಿಸ್ತಾನ: ಸ್ಥಳೀಯ ಐಎಸ್ ಮುಖಂಡನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬುಲ್‌: ಅಫ್ಗಾನಿಸ್ತಾನ ರಕ್ಷಣಾ ಪಡೆಗಳು ಪೂರ್ವ ನಗರ್‌ಹಾರ್‌ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ನಡೆಸಿದ ದಾಳಿ ವೇಳೆ ಇಸ್ಲಾಮಿಕ್‌ ಸ್ಟೇಟ್ಸ್‌ನ (ಐಎಸ್‌) ಸ್ಥಳೀಯ ನಾಯಕ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ. ರಾಷ್ಟ್ರೀಯ ಗುಪ್ತಚರ ದಳ ಈ ಮಾಹಿತಿಯನ್ನು ಖಚಿತಪಡಿಸಿದೆ.

'ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ (ಎನ್‌ಡಿಎಫ್‌) ವಿಶೇಷ ಕಾರ್ಯಪಡೆಗಳು, ಐಎಸ್‌ಗೆ ಹೊಸದಾಗಿ ನೇಮಕಗೊಂಡಿರುವ ನಾಯಕ ಹಕಿಮುಲ್ಲಾ ಎಂಬಾತನನ್ನು ಸೆರೆ ಹಿಡಿಯಲು ನಗರ್‌ಹಾರ್‌ ಪ್ರಾಂತ್ಯದ ಕುಜ್‌ ಕುನಾರ್‌ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದವು' ಎಂದು ಗುಪ್ತಚರ ಇಲಾಖೆ ಟ್ವೀಟ್‌ ಮೂಲಕ ತಿಳಿಸಿದೆ.

'ಸೆರೆ ಹಿಡಿಯಲು ಗುರಿ ಮಾಡಿದ್ದ ವ್ಯಕ್ತಿ ಗುಂಡಿನ ಚಕಮಕಿ ನಡೆದ ಸ್ಥಳದಿಂದ ಪರಾರಿಯಾಗಲು ಯೋಚಿಸಿದ್ದ. ಪಾಚಿರ್‌ ವಾ ಅಗಮ್‌ ಮತ್ತು ಹಸ್ಕಾ ಮಿನಾ ಜಿಲ್ಲೆಗಳಲ್ಲಿ ಐಎಸ್‌ ಮಿಲಿಟರಿ ಮುಖ್ಯಸ್ಥನಾಗಿದ್ದ ಹಕಿಮುಲ್ಲಾ ದಾಳಿ ವೇಳೆ ಹತ್ಯೆಯಾಗಿದ್ದಾನೆ ಎಂದೂ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು