ಸೋಮವಾರ, ಮಾರ್ಚ್ 20, 2023
24 °C

ಮಲೇಷ್ಯಾ: ಸರ್ಕಾರವನ್ನು ಪತನಗೊಳಿಸದಂತೆ ವಿರೋಧ ಪಕ್ಷದೊಂದಿಗೆ ಪ್ರಧಾನಿ ಒಪ್ಪಂದ

ಎಪಿ, Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಮಲೇಷ್ಯಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಇಸ್ಮಾಯಿಲ್‌ ಸಬ್ರಿ ಯಾಕೊಬ್‌ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ವಿರೋಧ ಪಕ್ಷದ ಬೆಂಬಲ ಪಡೆಯುವಲ್ಲಿ ಸಫಲರಾಗಿದ್ದಾರೆ.

ಸೋಮವಾರ ಸಂಸತ್ತು ಪುನರಾರಂಭವಾಗಿದ್ದು, ಇದರ ಬೆನ್ನಲ್ಲೇ ಕೆಲವೊಂದು ಸುಧಾರಣೆಗಳ ಬದಲಿಗೆ ತಮ್ಮ ಸರ್ಕಾರವನ್ನು ಉರುಳಿಸದಂತೆ ವಿರೋಧ ಪಕ್ಷಗಳೊಂದಿಗೆ ಇಸ್ಮಾಯಿಲ್‌ ಒಪ್ಪಂದ ಮಾಡಿಕೊಂಡಿದ್ದಾರೆ.

ಮಲೇಷ್ಯಾದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ತಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಮಾಡದಂತೆ ವಿರೋಧ ಪಕ್ಷಗಳೊಂದಿಗೆ ಪ್ರಧಾನಿ ಇಸ್ಮಾಯಿಲ್ ಅವರು ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಒಪ್ಪಂದದಂತೆ ಈಗಾಗಲೇ 114 ಸದಸ್ಯರ ಬೆಂಬಲ ಹೊಂದಿರುವ ಇಸ್ಮಾಯಿಲ್‌ಗೆ ವಿರೋಧ ಪಕ್ಷದ 88 ಸದಸ್ಯರ ಬೆಂಬಲವೂ ಸಿಗಲಿದೆ.

ಈ ಬಗ್ಗೆ ಭಾನುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರದ ಪ್ರತಿನಿಧಿ ಮತ್ತು ವಿರೋಧ ಪಕ್ಷದ ನಾಯಕ ಅನ್ವರ್‌ ಅವರು, ‘ದ್ವಿಪಕ್ಷೀಯ ಸಹಕಾರವು ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಮರುಸ್ಥಾಪಿಸಲಿದೆ. ಇದು ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟ ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನೆರವಾಗಲಿದೆ’ ಎಂದು ಹೇಳಿದರು.

‘ನಾವು ಆಡಳಿತ ಮತ್ತು ಸಂಸತ್ತಿನ ಸುಧಾರಣೆಗಳನ್ನು ಸದೃಢಗೊಳಿಸುವತ್ತ ಗಮನಹರಿಸುತ್ತೇವೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು