ಸೋಮವಾರ, ಸೆಪ್ಟೆಂಬರ್ 20, 2021
29 °C

ಮಲೇಷ್ಯಾ ಪ್ರಧಾನಿ ಮುಹಿದ್ದೀನ್‌ ಯಾಸೀನ್‌ ರಾಜೀನಾಮೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ‘ಮಲೇಷ್ಯಾ ಪ್ರಧಾನಿ ಮುಹಿದ್ದೀನ್‌ ಯಾಸೀನ್‌ ನೇತೃತ್ವದ ಸಚಿವ ಸಂಪುಟವು ಸೋಮವಾರ ತನ್ನ ರಾಜೀನಾಮೆ ಪತ್ರವನ್ನು ರಾಜನಿಗೆ ಸಲ್ಲಿಸಿದೆ’ ಎಂದು ವಿಜ್ಞಾನ ಸಚಿವ ಖೈರಿ ಜಮಾಲುದ್ದೀನ್ ಅವರು ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಧಾನಿ ಮುಹಿದ್ದೀನ್‌ ಯಾಸೀನ್‌ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಯಾಸೀನ್‌ ಅವರು ಇಂದು ಬೆಳಿಗ್ಗೆ ಅರಮನೆಗೆ ಭೇಟಿ ನೀಡಿದ್ದರು ಎಂದು ವರದಿಯೊಂದು ಹೇಳಿದೆ.

ಯಾಸೀನ್‌ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಲಭ್ಯವಿಲ್ಲ. ಆದರೆ, ಕೋವಿಡ್ ಪಿಡುಗು ಮತ್ತು ಆರ್ಥಿಕ ಕುಸಿತದ ನಡುವೆ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ.

ಮಲೇಷ್ಯಾದ ರಾಜ ಔಪಚಾರಿಕವಾಗಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಮುಹಿದ್ದೀನ್‌ ಯಾಸೀನ್‌ ಅವರು ಚುನಾವಣೆಯಿಲ್ಲದೆಯೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು