ಬುಧವಾರ, ಜೂನ್ 23, 2021
22 °C

ನ್ಯೂಜಿಲೆಂಡ್ ಸೂಪರ್‌ಮಾರ್ಕೆಟ್‌ನಲ್ಲಿ ಚೂರಿ ಇರಿತ

ಎಪಿ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಡುನೆಡಿನ್‌ ನಗರದ ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಸೋಮವಾರ ವ್ಯಕ್ತಿಯೊಬ್ಬ ಚೂರಿಯಿಂದ ಮನಬಂದಂತೆ ಸಾರ್ವಜನಿಕರಿಗೆ  ಇರಿದ ಘಟನೆ ನಡೆಸಿದ್ದು, ಐವರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.

ಸೂಪರ್‌ಮಾರ್ಕೆಟ್‌ನಲ್ಲಿ ಜನ ಖರೀದಿಯಲ್ಲಿ ತೊಡಗಿದ್ದಾಗ ವ್ಯಕ್ತಿ ಚೂರಿ ಇರಿತ ಆರಂಭಿಸಿದ. ಜನರು ಕಂಗೆಟ್ಟು, ಅರಚುತ್ತ ಹೊರ ಹೋಗಲು ಪ್ರಯತ್ನಿಸಿದರು. ಗ್ರಾಹಕರಲ್ಲೇ ಕೆಲವು ಧೈರ್ಯಶಾಲಿಗಳು ಆರೋಪಿಯನ್ನು ಹಿಡಿಯುವಲ್ಲಿ ಸಫಲರಾದರು.

‘ದಾಳಿಯ ಹಿಂದಿನ ಉದ್ದೇಶ ಇನ್ನೂ ಖಚಿತವಾಗಿಲ್ಲ, ಇದೊಂದು ದೇಶೀಯ ಭಯೋತ್ಪಾದನೆ ಕೃತ್ಯ ಎಂದು ಹೇಳುವುದಕ್ಕೆ ಸದ್ಯ ಯಾವುದೇ ಸಾಕ್ಷ್ಯ ದೊರೆತಿಲ್ಲ’ ಎಂದು ಪ್ರಧಾನಿ ಜೆಸಿಂಡಾ ಆರ್ಡೆರ್ನ್‌ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು