ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ದೇಶದಲ್ಲಿ 7.6 ತೀವ್ರತೆಯ ಭಾರಿ ಭೂಕಂಪ

Last Updated 20 ಸೆಪ್ಟೆಂಬರ್ 2022, 3:13 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ:ಮೆಕ್ಸಿಕೊ ದೇಶದ ಪಶ್ಚಿಮ ಭಾಗದಲ್ಲಿ7.6ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು ಅಲ್ಲಿನ ಸರ್ಕಾರ ಜನರಿಗೆ ಸುನಾಮಿ ಎಚ್ಚರಿಕೆ ನೀಡಿದೆ.

ಸದ್ಯಕ್ಕೆ ಸಾವು ನೋವು, ಯಾವುದೇ ಹಾನಿಯಾದ ಬಗ್ಗೆ ವರದಿಗಳು ಬಂದಿಲ್ಲ. ಭೂಕಂಪವಾಗಿರುವ ಬಗ್ಗೆ ಅಲ್ಲಿನಭೂಕಂಪನಶಾಸ್ತ್ರ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಮಿಚೌಕಾನ್ ರಾಜ್ಯದ ಮೊರೆಲಾಸ್‌ ಪಟ್ಟಣದಿಂದ 46 ಕಿ.ಮೀ ದೂರದಲ್ಲಿ ಭೂಕಂಪವಾಗಿದೆ. 10 ಕಿ.ಮೀ ಅಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.

ನೂರಾರು ಕಟ್ಟಡಗಳು ಅಲುಗಾಡಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇದೊಂದು ಭಯಾನಕ ಅನುಭವ ಎಂದು ಮಹಿಳೆಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

ಮಿಚೌಕನ್‌ ರಾಜ್ಯಪೆಸಿಫಿಕ್ ಸಮುದ್ರ ತೀರಕ್ಕೆ ಹೊಂದಿಕೊಂಡಿದೆ. ಈ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT