ಸೋಮವಾರ, ಆಗಸ್ಟ್ 8, 2022
24 °C

ನಾಪತ್ತೆಯಾಗಿದ್ದ ರಷ್ಯಾದ ಎಎನ್ -26 ವಿಮಾನ ಸಮುದ್ರದಲ್ಲಿ ಪತನ: ವರದಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಮಾಸ್ಕೊ: ನಾಪತ್ತೆಯಾಗಿದ್ದ ಎಎನ್ -26 ವಿಮಾನವು ಸಮುದ್ರಕ್ಕೆ ಅಪ್ಪಳಿಸಿರುವ ಸ್ಥಳವನ್ನು ರಷ್ಯಾದ ತುರ್ತು ಸೇವಾ ಸಿಬ್ಬಂದಿ ಪತ್ತೆ ಮಾಡಿದೆ ಎಂದು ಆರ್‌ಐಎ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

ರಷ್ಯಾದ ಪೂರ್ವ ಕರಾವಳಿಯಲ್ಲಿ ಇಳಿಯಲು ತಯಾರಿ ನಡೆಸುತ್ತಿದ್ದಾಗ 28 ಪ್ರಯಾಣಿಕರಿದ್ದ ವಿಮಾನವು ವಾಯು ಸಂಚಾರ ನಿಯಂತ್ರಣ ವಿಭಾಗದೊಂದಿಗೆ ಸಂಪರ್ಕವನ್ನು ಕಳೆದುಕೊಂಡು ಕಾಣೆಯಾಗಿತ್ತು.

ರಕ್ಷಣಾ ಕಾರ್ಯಾಚರಣೆಗಾಗಿ ಹಲವು ಹಡಗುಗಳು ವಿಮಾನ ಪತನಗೊಂಡಿರುವ ಸ್ಥಳಕ್ಕೆ ತೆರಳುತ್ತಿವೆ ಎಂದು ವರದಿ ತಿಳಿಸಿದೆ.

ವಿಮಾನವು ಓಖೋಟ್ಸ್ಕ್ ಕರಾವಳಿಯ ಸಮೀಪದಲ್ಲಿರುವ ಪಲಾನಾ ವಿಲೇಜ್‌ಗೆ ತೆರಳುತ್ತಿದ್ದಾಗ ನಾಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು