ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡರ್ನಾ ಕೋವಿಡ್‌–19 ಲಸಿಕೆ ಶೇ 94.5ರಷ್ಟು ಪರಿಣಾಮಕಾರಿ

Last Updated 16 ನವೆಂಬರ್ 2020, 15:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮಸಾಚುಸೆಟ್ಸ್‌ ಮೂಲದ ಮಾಡರ್ನಾ ಬಯೋಟೆಕ್‌ ಕಂಪನಿಯು ಅಭಿವೃದ್ಧಿ ಪಡಿಸಿರುವ ಕೋವಿಡ್‌–19 ಲಸಿಕೆಯು ಶೇ 94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಪ್ರಕಟಿಸಿದೆ.

ಕಳೆದ ವಾರವಷ್ಟೇ ಫೈಝರ್‌ ಮತ್ತು ಬಯೋನ್‌ಟೆಕ್‌, 'ತಾವು ಪ್ರಯೋಗಕ್ಕೆ ಒಳಪಡಿಸಿರುವ ಲಸಿಕೆಯು ಕೋವಿಡ್‌–19 ತಡೆಯುವುದರಲ್ಲಿ ಶೇ 90ರಷ್ಟು ಪರಿಣಾಮಕಾರಿಯಾಗಿದೆ' ಎಂದು ಪ್ರಕಟಿಸಿದ್ದವು.

ಮಾಡರ್ನಾದ 'ಎಂಆರ್‌ಎನ್‌ಎ–1273' ಕೋವಿಡ್‌–19 ಲಸಿಕೆಯ ಮೂರನೇ ಹಂತದ ಪ್ರಯೋಗಗಳ ಅಧ್ಯಯಗಳಲ್ಲಿ ಲಸಿಕೆಯು ಶೇ 94.5ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದು ಬಂದಿದೆ.

'ಜನವರಿಯಿಂದಲೂ ನಾವು ಈ ವೈರಸ್‌ನ ಹಿಂದೆ ಬಿದ್ದಿದ್ದು, ಜಗತ್ತಿನಾದ್ಯಂತ ಸಾಧ್ಯವಾದಷ್ಟು ಜನರನ್ನು ಉಳಿಸುವ ಉದ್ದೇಶದೊಂದಿಗೆ ಪ್ರಯತ್ನ ಮಾಡಿದ್ದೇವೆ. ಮೂರನೇ ಹಂತದ ಪ್ರಯೋಗಗಳಲ್ಲಿನ ಅಧ್ಯಯನದಲ್ಲಿ ಸಕಾರಾತ್ಮ ವಿಶ್ಲೇಷಣೆ ಕಂಡು ಬಂದಿರುವುದು, ಕೋವಿಡ್‌–19 ನಿಯಂತ್ರಿಸಲು ಲಸಿಕೆ ಪರಿಣಾಮಕಾರಿ ಎಂಬುದನ್ನು ಸಾಬೀತು ಪಡಿಸಿದೆ. ಪ್ರತಿಯೊಂದು ದಿನವೂ ಅತ್ಯಂತ ಮುಖ್ಯ ಎಂಬುದು ನಮ್ಮ ಅರಿವಿನಲ್ಲಿದೆ' ಎಂದು ಮಾಡರ್ನಾದ ಸಿಇಒ ಸ್ಟಿಫೇನ್‌ ಬಾನ್ಸೆಲ್‌ ಹೇಳಿದ್ದಾರೆ.

ಲಸಿಕೆಯ ಪರಿಣಾಮಕಾರಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಧ್ಯಂತರ ಮಾಹಿತಿಯನ್ನು ಆಧರಿಸಿ ತುರ್ತು ಸಂದರ್ಭಗಳಲ್ಲಿ ಲಸಿಕೆಯ ಬಳಕೆಗಾಗಿ ಅನುಮತಿ ಕೋರಿ ಮನವಿ ಸಲ್ಲಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಎಫ್‌ಡಿಎ ಅನುಮತಿ ಪರಿಶೀಲನೆ ನಡೆಸಲಿದೆ.

2020ರ ಅಂತ್ಯದೊಳಗೆ ಅಮೆರಿಕದಲ್ಲಿ 'ಎಂಆರ್‌ಎನ್‌ಎ–1273' ಕೋವಿಡ್‌–19 ಲಸಿಕೆಯ ಅಂದಾಜು 2 ಕೋಟಿ ಡೋಸ್‌ಗಳನ್ನು ತಯಾರಿಸುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಜಾಗತಿಕವಾಗಿ 2021ಕ್ಕೆ 50ರಿಂದ 100 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸುವ ಗುರಿ ಹೊಂದಿದೆ.

ಜಗತ್ತಿನಾದ್ಯಂತ 5.4 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, 13 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT