ಅಫ್ಗಾನಿಸ್ತಾನ ಸರ್ಕಾರದ ಮುಖ್ಯಸ್ಥ ಮುಲ್ಲಾ ಅಕುಂದ್

ಕಾಬೂಲ್ (ಎಎಫ್‌ಪಿ): ವಿಶ್ವ ಸಂಸ್ಥೆಯು ನಿಷೇಧ ಹೇರಿರುವ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ ಅವರನ್ನು ಅಫ್ಗಾನಿಸ್ತಾನದ ಹೊಸ ಸರ್ಕಾರದ ಮುಖ್ಯಸ್ಥ ಎಂದು ತಾಲಿ
ಬಾನ್ ಮಂಗಳವಾರ ಘೋಷಿಸಿದೆ. ತಾಲಿಬಾನ್‌ನಲ್ಲಿ ಸಕ್ರಿಯರಾಗಿರುವ ಹಲವರನ್ನು ಸರ್ಕಾರದ ಪ್ರಮುಖ ಹುದ್ದೆಗಳಿಗೆ ನೇಮಿಸಿದೆ.
ಅಕುಂದ್ ಕಂದಹಾರ್‌ನವರು. 1990ರ ದಶಕದಲ್ಲಿ ತಾಲಿಬಾನ್ ಆಳ್ವಿಕೆ ಇದ್ದಾಗ ಅವರು ಪ್ರಮುಖ ಪ್ರಾಂತ್ಯ
ವೊಂದರ ಗವರ್ನರ್ ಅಗಿದ್ದರು. ವಿದೇ
ಶಾಂಗ ಖಾತೆಯ ಉಪಸಚಿವರೂ ಆಗಿದ್ದರು. ತಾಲಿಬಾನ್‌ನ ಸಹ ಸಂಸ್ಥಾಪಕ ಮುಲ್ಲಾ ಉಮರ್‌ನ ನಿಕಟವರ್ತಿ ಎಂದು ಹೇಳಲಾಗಿದೆ.
ತಾಲಿಬಾನ್‌ನ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದರ್ ಮತ್ತು ಅಬ್ದುಲ್ ಸಲಾಂ ಹನಫಿ ಅವರು ಸರ್ಕಾರದ ಉಪ ನಾಯಕರಾಗಿರುತ್ತಾರೆ. ಹನಫಿ ಅವರು ಕತಾರ್‌ನ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಸದಸ್ಯ. ಮುಲ್ಲಾ ಉಮರ್ ಅವರ ಮಗ ಮುಲ್ಲಾ ಯಾಕೂಬ್ ಅವರು ರಕ್ಷಣಾ ಸಚಿವರಾಗಲಿದ್ಧಾರೆ. ಭಯೋತ್ಪಾದನೆಗೆ ಕುಖ್ಯಾತವಾದ ಹಖ್ಖಾನಿ ಗುಂಪಿನ ನಾಯಕ ಸಿರಾಜುದ್ದೀನ್ ಹಖ್ಖಾನಿಯು ಗೃಹ ಸಚಿವರಾಗಲಿದ್ದಾರೆ. ಈ ವ್ಯಕ್ತಿಯು ತಾಲಿಬಾನ್‌ನ ಉಪ ನಾಯಕನೂ ಹೌದು. ಹಖ್ಖಾನಿಯ ಬಂಧನಕ್ಕೆ ನೆರವಾಗುವ ಮಾಹಿತಿ ಕೊಡುವವರಿಗೆ ಭಾರಿ ಮೊತ್ತದ ಬಹುಮಾನವನ್ನು ಅಮೆರಿಕದ ಘೋಷಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.