ಗುರುವಾರ , ಸೆಪ್ಟೆಂಬರ್ 16, 2021
29 °C

ಅಫ್ಗನ್ ನೂತನ ಸರ್ಕಾರಕ್ಕೆ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ನಾಯಕ: ತಾಲಿಬಾನ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದ ನೂತನ ಸರ್ಕಾರಕ್ಕೆ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರು ನಾಯಕರಾಗಿರಲಿದ್ದಾರೆ ಎಂದು ತಾಲಿಬಾನ್ ಮಂಗಳವಾರ ಘೋಷಿಸಿದೆ.

ಕಾಬೂಲ್‌ನ ಸರ್ಕಾರಿ ಮಾಹಿತಿ ಮತ್ತು ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್ ಮುಖ್ಯ ವಕ್ತಾರ ಜಬಿಯುಲ್ಲಾ ಮುಜಾಹಿದ್, ‘ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದರ್ ಸರ್ಕಾರದ ಉಪ ನಾಯಕನಾಗಿರಲಿದ್ದಾರೆ’ ಎಂದು ತಿಳಿಸಿದ್ದಾರೆ.

ಓದಿ: 

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕುಬ್‌ರನ್ನು ರಕ್ಷಣಾ ಸಚಿವರನ್ನಾಗಿ ಘೋಷಿಸಲಾಗಿದೆ. ಹಖ್ಖಾನಿ ಗುಂಪಿನ ನಾಯಕ ಸಿರಾಜುದ್ದೀನ್ ಹಖ್ಖಾನಿ ಅವರನ್ನು ಆಂತರಿಕ ಸಚಿರನ್ನಾಗಿ ನೇಮಕ ಮಾಡಲಾಗಿದೆ.

‘ಸಚಿವ ಸಂಪುಟ ಇನ್ನೂ ಪೂರ್ಣಗೊಂಡಿಲ್ಲ. ಈಗ ಘೋಷಣೆ ಮಾಡಿರುವುದು ಹಂಗಾಮಿ ಸಂಪುಟವಷ್ಟೆ’ ಎಂದು ಮುಜಾಹಿದ್ ತಿಳಿಸಿದ್ದಾರೆ.

ದೇಶದ ಇತರ ಪ್ರದೇಶಗಳ ಜನರನ್ನೂ ಒಳಗೊಂಡಿರುವ ಸಂಪುಟ ರಚಿಸಲು ಪ್ರಯತ್ನಿಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಪೂರ್ವನಿಗದಿಯಂತೆ ಸೆಪ್ಟೆಂಬರ್ 4ರಂದೇ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಬೇಕಿತ್ತು. ಆದರೆ ಹೊಸ ಸರ್ಕಾರ ರಚನೆ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ತಿಳಿಸಿದ್ದರು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು