ವಾಷಿಂಗ್ಟನ್: ನನ್ನ ಜೀವನದ ಸಂಪೂರ್ಣ ಯಶಸ್ಸು ನನ್ನ ತಾಯಿ ಶ್ಯಾಮಲಾ ಗೋಪಾಲನ್ ಅವರಿಗೆ ಸಲ್ಲುತ್ತದೆ. ಅವರು ಜೀವಮಾನವಿಡೀ ಮಹಿಳೆಯರ ಪರ ಹೋರಾಟ ನಡೆಸಿದರು ಎಂದು ಡೆಮಾಕ್ರಟಿಕ್ ಪಕ್ಷದಿಂದ ಕಣಕ್ಕಿಳಿದಿರುವ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿಳಿಸಿದರು.

‘ಅವರ ಜೀವನದ ಕಥೆಗಳು ನನಗೆ ಸದಾ ಸ್ಪೂರ್ತಿ ನೀಡುತ್ತದೆ. ನನ್ನ ತಾಯಿ ಜೀವನ ಪೂರ್ತಿ ಮಹಿಳೆಯರ ಪರವಾಗಿ ಹೋರಾಟ ನಡೆಸಿದ್ದರು. ಅವರು ಸ್ತನ ಕ್ಯಾನ್ಸರ್ ವಿಷಯದಲ್ಲಿ ಪರಿಣಿತಿ ಪಡೆದಿದ್ದರು. ಆರೋಗ್ಯ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಾಮುಖ್ಯತೆ ಪಡೆಯಬೇಕು ಎಂಬುದು ಅವರ ಇಚ್ಛೆಯಾಗಿತ್ತು’ ಎಂದು ಕಮಲಾ ಹ್ಯಾರಿಸ್ ಅವರುಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿ ಅವರ ಅಹಿಂಸಾತ್ಮಕ ಚಳುವಳಿಯಿಂದ ಪ್ರೇರಿತಗೊಂಡ ಶ್ಯಾಮಲಾ ಅವರು ಇಲ್ಲಿಯೂ ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದುಹಿಲರಿ ಕ್ಲಿಂಟನ್ ತಿಳಿಸಿದರು.

ಕಮಲಾ ಹ್ಯಾರಿಸ್ ತಾಯಿ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿಯಬೇಕು ಎಂಬ ಕನಸಿನೊಂದಿಗೆ ಭಾರತದಿಂದ ಅಮೆರಿಕಗೆ ಬಂದಿದ್ದರು ಎಂದು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.