ಬ್ಯಾಂಕಾಕ್: ‘ಗಣಿಗಾಗಿ ನೆಲದಾಳ ಹುದುಗಿಸಿದ ಸ್ಫೋಟಕಗಳ ಸ್ಫೋಟಕ್ಕೆ ಪ್ರತಿದಿನ ಮ್ಯಾನ್ಮಾರ್‌ನಲ್ಲಿ ಸಾವು–ನೋವು ಸಂಭವಿಸುತ್ತಿದ್ದು, ಸಾವಿನ ಪ್ರಮಾಣ ಶೇ. 40ರಷ್ಟು ಏರಿದೆ ‘ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
‘2021ರಲ್ಲಿ ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಸರ್ಕಾರವನ್ನು ಉರುಳಿಸಿ ಮಿಲಿಟರಿಯು ಅಲ್ಲಿನ ಆಡಳಿತ ಕೈಗೆತ್ತಿಕೊಂಡಿತು. ಪರಿಣಾಮ ಶುರುವಾದ ಜನಾಂಗೀಯ ಮೂಲಭೂತವಾದಿಗಳು ಹಾಗೂ ಸೇನಾ ದಳದ ನಡುವಿನ ಸಂಘರ್ಷ. ದಶಕಗಳಿಂದ ಸೇನೆಯು ಮುನ್ನುಗ್ಗಲು ಅಸಾಧ್ಯ ಸ್ಥಳಗಳಲ್ಲಿ ಮೂಲಭೂತವಾದಿಗಳು ತಮ್ಮ ರಕ್ಷಣೆಗಾಗಿ ‘ಜನ ರಕ್ಷಣಾ ದಳ‘ವನ್ನು ಕಟ್ಟಿಕೊಂಡಿದ್ದಾರೆ. ಇಂಥ ಸ್ಥಳಗಳು ಸಾವು ನೋವಿಗೆ ಸಾಕ್ಷಿಯಾಗುತ್ತಿವೆ‘
ಜತೆಗೆ, ‘ಜೀವ ವಿರೋಧಿ ಗಣಿಗಾರಿಕೆ ಮತ್ತು ಭೂ ವಿರೋಧಿ ಅಭಿವೃದ್ಧಿ ಕುರಿತು ಆಗ್ನೇಯ ಏಷ್ಯಾ ರಾಷ್ಟ್ರಗಳು ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿಲ್ಲ ‘ ಎಂದೂ ವಿಶ್ವ ಸಂಸ್ಥೆ ಹೇಳಿದೆ.
‘ಮ್ಯಾನ್ಮಾರ್‌ನ ಅರಣ್ಯ ಸಂಪತ್ತು ಹಾಗೂ ಮಾದಕ ವಸ್ತುಗಳ ವಹಿವಾಟಿನ ಮೇಲಿನ ನಿಯಂತ್ರಣಕ್ಕಾಗಿ ಮೂಲಭೂತವಾದಿಗಳು ಹಾಗೂ ಮಿಲಿಟರಿ ನಡುವೆ ಆಗಾಗ ಘರ್ಷಣೆ ಸಂಭವಿಸುತ್ತಿರುತ್ತವೆ. ಇದರಿಂದ ಪ್ರತಿದಿನ ಪ್ರಾಣ ಹಾನಿಯಾಗುತ್ತಿದೆ. 2022ರಲ್ಲಿ ಗಣಿಗಾರಿಕೆಗೆ ಬಳಸಿದ ಸ್ಫೋಟಕಗಳಿಂದ 390 ಮಂದಿ ಸಾವು ನೋವಿಗೆ ತುತ್ತಾಗಿದ್ದಾರೆ ‘ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯು (UNICF) ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.