ಶುಕ್ರವಾರ, ಮೇ 27, 2022
31 °C

ಅಮೆರಿಕ, ಯುರೋಪ್ ಮಕ್ಕಳಿಗೆ ನಿಗೂಢ ಯಕೃತ್ತು ಸೋಂಕು

ಎಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕ, ಯುರೋಪ್ ಸೇರಿದಂತೆ ಇತರ ದೇಶಗಳ ಮಕ್ಕಳಲ್ಲಿ ನಿಗೂಢ ರೀತಿಯ ಯಕೃತ್‌ ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಸೋಂಕು ಚಳಿಗೆ ಸಂಬಂಧಿಸಿದ ವೈರಸ್‌ ಆಗಿರಬಹುದು. ಅಲ್ಲದೆ, ಈ ಸೋಂಕಿನ ನಿಯಂತ್ರಣದ ಕುರಿತು ಅಧ್ಯಯನ ನಡೆಯುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಬ್ರಿಟನ್‌ನಲ್ಲಿ ಕನಿಷ್ಠ 75 ಮಕ್ಕಳು, ಅಮೆರಿಕದ 9 ಮಕ್ಕಳಲ್ಲಿ ಹೆಪಟೈಟಿಸ್‌ಗೆ ಸಂಬಂಧಿಸಿದ ಕಾಯಿಲೆ ಪತ್ತೆಯಾಗಿದೆ. ಅಲ್ಲದೆ ಸ್ಪೇನ್ ಮತ್ತು ಐರ್ಲೆಂಡ್ ಸೇರಿದಂತೆ ಇನ್ನಿತರ ದೇಶಗಳ ಕೆಲ ಮಕ್ಕಳಲ್ಲಿ ಇದೇ ರೀತಿಯ ಸೋಂಕು ಪತ್ತೆಯಾಗಿದ್ದು, ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಸೋಂಕಿಗೆ ತುತ್ತಾಗುವ ಮಕ್ಕಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್ಒ ಆತಂಕ ವ್ಯಕ್ತಪಡಿಸಿದೆ.

ಕಾಮಾಲೆ, ಅತಿಸಾರ ಹಾಗೂ ಹೊಟ್ಟೆನೋವಿಗೆ ಕಾರಣವಾಗುವ ಈ ಸೋಂಕು ಮೊದಲಿಗೆ ಸ್ಕಾಟ್ಲೆಂಡ್‌ನಲ್ಲಿ ಪತ್ತೆಯಾಗಿತ್ತು. ಆ ಬಳಿಕ ಇತರ ದೇಶಗಳಿಗೂ ವ್ಯಾಪಿಸುತ್ತಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು