ಉತ್ತರ ಕೊರಿಯಾದಿಂದ ಮೂರು ಕ್ಷಿಪಣಿಗಳ ಉಡಾವಣೆ

ಸೋಲ್: ಉತ್ತರ ಕೊರಿಯಾ ತನ್ನ ಕಡಲ ಗಡಿಯ ಪೂರ್ವಭಾಗದತ್ತು ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಶನಿವಾರ ಉಡಾವಣೆ ಮಾಡಿದೆ.
ದಕ್ಷಿಣ ಕೊರಿಯಾವು ಬಾಹ್ಯಾಕಾಶದ ಮೂಲಕವೂ ಕಣ್ಗಾವಲು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಭಾಗವಾಗಿ ಶುಕ್ರವಾರ ಘನ ಇಂಧನ ಚಾಲಿತ ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತನ್ನ ವಾಯುಪ್ರದೇಶದಲ್ಲಿ ಉತ್ತರ ಕೊರಿಯಾದ ಐದು ಡ್ರೋನ್‌ಗಳು ಹಾರಾಟ ನಡೆಸಿವೆ ಎಂದು ದಕ್ಷಿಣ ಕೊರಿಯಾ ಕಳೆದ ವಾರ ದೂರಿತ್ತು. ಈ ಬೆಳವಣಿಗೆ ಉಭಯ ದೇಶಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.