ಸೋಮವಾರ, ಸೆಪ್ಟೆಂಬರ್ 28, 2020
20 °C

ನಾಗಸಾಕಿ ಮೇಲಿನ ಅಣುಬಾಂಬ್‌ ದಾಳಿಗೆ 75 ವರ್ಷ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನಾಗಸಾಕಿ(ಜಪಾನ್‌): ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದು 75 ವರ್ಷ ತುಂಬಿದೆ. ಈ ನಿಮಿತ್ತ ಜಪಾನ್‌ನಲ್ಲಿ ಭಾನುವಾರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.

ಅಮೆರಿಕ 1945 ಆ.6ರಂದು  ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬ್‌ ದಾಳಿ ನಡೆಸಿದ್ದು, 1.40 ಲಕ್ಷ ಜನ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ನಾಗಸಾಕಿಯ ಮೇಲೆ ನಡೆಸಿದ ಅಣುಬಾಂಬ್‌ ದಾಳಿಯಲ್ಲಿ 74,000 ಜನರು ತಮ್ಮ ಪ್ರಾಣ ಕಳೆದುಕೊಂಡರು.

ಜಪಾನ್‌ ಅಣುಬಾಂಬ್‌ ದಾಳಿಗೆ ಗುರಿಯಾದ ಏಕಮಾತ್ರ ರಾಷ್ಟ್ರವಾಗಿದೆ. ಈ ನಿಮಿತ್ತ ಕಾರ್ಯಕ್ರಮದಲ್ಲಿ ಅಣುಬಾಂಬ್‌ ದಾಳಿಯಲ್ಲಿ ಬದುಕುಳಿದವರು, ಅವರ ಸಂಬಂಧಿಕರು, ವಿದೇಶಿ ಪ್ರಮುಖರು ಭಾಗವಹಿಸಿದ್ದರು. ಬೆಳಿಗ್ಗೆ 11.02 ಕ್ಕೆ ಸರಿಯಾಗಿ ಮೌನ ಪ್ರಾರ್ಥನೆ ನಡೆದಿದ್ದು, ವಿಶ್ವಶಾಂತಿ ರಕ್ಷಣೆಗೆ ಕೋರಲಾಯಿತು.  

‘ಕೊರೊನಾ ವೈರಾಣುಹರಡಲಾರಂಭಿಸಿದಾಗ ಮಾತ್ರ ನಾವು ಅದರ ಬಗ್ಗೆ ಭಯಪಡಲು ಆರಂಭಿಸಿದೆವು. ಅದೇ ರೀತಿ ಅಣುಬಾಂಬ್‌ನ ಪರಿಣಾಮ ಜನರಿಗೆ ಅರಿವಿಲ್ಲ. ಸಂಕಷ್ಟಕ್ಕೆ ಸಿಲುಕಿದಾಗ ಮಾತ್ರ ಅದರ ನೋವು ನಮಗೆ ತಿಳಿಯುತ್ತದೆ’ ಎಂದು ನಾಗಸಾಕಿಯ ಮೇಯರ್‌ ಟೋಮಿಹಿಸಾ ಟೌ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು