ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದ ಅಧ್ಯಕ್ಷರಾಗಿ ರಾಂ ಚಂದ್ರ ಪೌಡೆಲ್‌ ಆಯ್ಕೆ

Last Updated 9 ಮಾರ್ಚ್ 2023, 16:02 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ನೂತನ ಅಧ್ಯಕ್ಷರಾಗಿ, 78 ವರ್ಷದ ರಾಂ ಚಂದ್ರ ಪೌಡೆಲ್ ಗುರುವಾರ ಆಯ್ಕೆಯಾದರು. ನೇಪಾಳದಲ್ಲಿ ಪ್ರಸ್ತುತ ಮೈತ್ರಿ ಸರ್ಕಾರದ ಆಡಳಿತವಿದ್ದು, ರಾಜಕೀಯ ಅನಿಶ್ಚಿತತೆ ಇದೆ.

ಪ್ರಧಾನಿ ಪುಷ್ಪಕಮಲ್‌ ದಹಲ್‌ ನೇತೃತ್ವದ ‘ಪ್ರಚಂಡ’, ಪೌಡೆಲ್‌ ನೇತೃತ್ವದ ನೇಪಾಳಿ ಕಾಂಗ್ರೆಸ್‌ ಒಳಗೊಂಡಂತೆ ಒಟ್ಟು ಎಂಟು ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಇವರು ಕಣದಲ್ಲಿದ್ದರು.

ಪೌಡೆಲ್‌ ಪರ ಸಂಸತ್ತಿನ 214 ಮತ್ತು ಪ್ರಾಂತೀಯ ವಿಧಾನಸಭೆಗಳ 352 ಸದಸ್ಯರು ಮತಚಲಾಯಿಸಿದರು. ಪ್ರತಿಸ್ಪರ್ಧಿಯಾಗಿದ್ದ ಸುಭಾಷ್‌ ಚಂದ್ರ ನೆಬ್‌ಮಾಂಗ್‌ ಅವರಿಗೆ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ನೇತೃತ್ವದ ಸಿಪಿಎನ್–ಯುಎಂಎಲ್ ಬೆಂಬಲಿಸಿತ್ತು.

2008ರಲ್ಲಿ ನೇಪಾಳ ಗಣರಾಜ್ಯವಾದ ನಂತರ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಮೂರನೇ ಚುನಾವಣೆ ಇದಾಗಿದೆ. ಹಾಲಿ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ಅಧಿಕಾರವಧಿ ಮಾರ್ಚ್‌ 12ಕ್ಕೆ ಅಂತ್ಯವಾಗಲಿದೆ.

ಸಂಸತ್ತಿನ 332 ಸದಸ್ಯರು, ಪ್ರಾಂತೀಯ ವಿಧಾನಸಭೆಗಳ 550 ಸದಸ್ಯರಿಗೆ ಮತದಾನ ಹಕ್ಕಿತ್ತು. ಇವರಲ್ಲಿ ಕ್ರಮವಾಗಿ 313 ಮತ್ತು 518 ಸದಸ್ಯರು ಹಕ್ಕು ಚಲಾಯಿಸಿದರು ಎಂದು ಚುನಾವಣಾ ಆಯೋಗದ ವಕ್ತಾರ ಶಾಲಿಗ್ರಾಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT