ಮಂಗಳವಾರ, ಜನವರಿ 26, 2021
28 °C

ಟ್ರಂಪ್‌ ಸಂಸ್ಥೆಯ ಜೊತೆಗಿನ ಒಪ್ಪಂದ ರದ್ದು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ‘ಕ್ಯಾಪಿಟಲ್‌ ಹಿಲ್‌ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಸಂಸ್ಥೆಯೊಂದಿಗಿನ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡಲಾಗಿದೆ’ ಎಂದು ನ್ಯೂಯಾರ್ಕ್‌ ಸಿಟಿ ಮೇಯರ್‌ ಬಿಲ್‌ ಬ್ಲಾಸಿಯೊ ಬುಧವಾರ ತಿಳಿಸಿದ್ದಾರೆ.

‘ದಂಗೆಕೋರರ ಜೊತೆ ನ್ಯೂಯಾರ್ಕ್‌ ಸಿಟಿ ಯಾವುದೇ ವ್ಯವಹಾರ ಮಾಡುವುದಿಲ್ಲ’ ಎಂದು ಡೆಮಾಕ್ರಟಿಕ್‌ ಪಕ್ಷದ ಬ್ಲಾಸಿಯೊ ಹೇಳಿದ್ದಾರೆ.

‘ಸೆಂಟ್ರಲ್‌ ಪಾರ್ಕ್‌, ಫೆರಿ ಪಾಯಿಂಟ್ ಗಾಲ್ಫ್‌ ಕೋರ್ಸ್‌ ಹಾಗೂ ವೊಲ್‌ಮನ್‌ ಮತ್ತು ಲ್ಯಾಸ್ಕರ್‌ನಲ್ಲಿರುವ ಸ್ಕೇಟಿಂಗ್‌ ರಿಂಕ್ಸ್‌ಗಳ ನಿರ್ವಹಣೆ ಸಂಬಂಧ ಟ್ರಂಪ್‌ ಅವರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅವುಗಳನ್ನು ರದ್ದು ಪಡಿಸಿದ್ದೇವೆ’ ಎಂದು ಅವರು ನುಡಿದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು