ಬುಧವಾರ, ಮಾರ್ಚ್ 29, 2023
30 °C

ಕೋವಿಡ್‌ ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಸೋಂಕು ಉಲ್ಬಣ: ಅತ್ಯಧಿಕ ಕೇಸು ಪತ್ತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಆಕ್ಲೆಂಡ್‌: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಕಠಿಣ ನಿಯಮಗಳು, ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯ ಫಲವಾಗಿ ಇದೇ ವರ್ಷದ ಮೇನಲ್ಲಿ ‘ಕೋವಿಡ್‌ ಮುಕ್ತ ದೇಶ’ ಎನಿಸಿಕೊಂಡಿದ್ದ ನ್ಯೂಜಿಲೆಂಡ್‌ನಲ್ಲಿ ಈಗ ಸೋಂಕು ಉಲ್ಬಣದ ಹಾದಿ ಹಿಡಿದಿದೆ. ದೇಶದಲ್ಲಿ ಇದೇ ಪ್ರಥಮ ಬಾರಿಗೆ ಕೋವಿಡ್‌ ಪ್ರಕರಣಗಳು 200 ಗಡಿ ದಾಟಿವೆ.

ಇದನ್ನೂ ಓದಿ: ನ್ಯೂಜಿಲೆಂಡ್ ಮೊದಲ‌ ಕೊರೊನಾ ಮುಕ್ತ ದೇಶ!

50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನ್ಯೂಜಿಲೆಂಡ್‌, ಹಲವು ಕಾರಣಗಳಿಂದಾಗಿ ತನ್ನ ನಾಗರಿಕರಿಗೆ ಲಸಿಕೆ ಹಾಕಲು ಹರಸಾಹಸಪಡುತ್ತಿದೆ. ಇದರ ಮಧ್ಯೆಯೇ ಕೋವಿಡ್‌ ಕೂಡ ಹೆಚ್ಚಳವಾಗುತ್ತಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಕೋವಿಡ್‌ ಅಬ್ಬರ: ಈ ವರೆಗಿನ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ಪತ್ತೆ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆಕ್ಲೆಂಡ್‌ನಲ್ಲಿ 200 ಹೊಸ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ರೂಪಾಂತರವು ಕಂಡು ಬಂದ ಹಿನ್ನೆಲೆಯಲ್ಲಿ ಈ ನಗರದ ಮೇಲೆ ಸುಮಾರು ಮೂರು ತಿಂಗಳು ನಿರ್ಬಂಧ ಹೇರಲಾಗಿತ್ತು. ಕೋವಿಡ್‌ ಉಲ್ಬಣದ ನಡುವೆಯೂ ಸೋಮವಾರದಿಂದ ಈ ನಗರದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ.

‘ಕ್ರಿಸ್‌ಮಸ್‌ ಮತ್ತು ಬೇಸಿಗೆ ಅವಧಿಯಲ್ಲಿ ನಾಗರಿಕರ ಮೇಲೆ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಜೆಸಿಂಡಾ ಅರ್ಡೆರ್ನ್‌ ಹೇಳಿದ್ದಾರೆ.

ಇದನ್ನೂ ಓದಿ: ಕೇವಲ 1 ಕೋವಿಡ್ ಪ್ರಕರಣ, 3 ದಿನ ನ್ಯೂಜಿಲೆಂಡ್ ಬಂದ್

ಲಸಿಕೆಯ ಪ್ರಾಮುಖ್ಯತೆಯನ್ನು ಶನಿವಾರದ ಪ್ರಕರಣಗಳು ಜನರಿಗೆ ನೆನಪಿಸುತ್ತಿವೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

12 ವರ್ಷ ಮೇಲ್ಪಟ್ಟ ದೇಶದ ಶೇ 78 ರಷ್ಟು ಮಂದಿ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದರೆ, ಶೇ 89ರಷ್ಟು ಜನರು ಶುಕ್ರವಾರದ ವೇಳೆಗೆ ಮೊದಲ ಡೋಸ್ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಕೋವಿಡ್‌ ವಿರುದ್ಧ ನ್ಯೂಜಿಲೆಂಡ್‌ ಗೆದ್ದರೂ ಆರೋಗ್ಯ ಸಚಿವ ರಾಜೀನಾಮೆ

ಆದಾಗ್ಯೂ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನ್ಯೂಜಿಲೆಂಡ್‌ನ ಕೋವಿಡ್‌ ಪರಿಸ್ಥಿತಿ ಅಷ್ಟು ಗಂಭೀರವೇನಲ್ಲ. ಈ ವರೆಗೆ ಅಲ್ಲಿ ವರದಿಯಾಗಿರುವುದು ಕೇವಲ 7,000 ದಷ್ಟು ಪ್ರಕರಣಗಳಷ್ಟೇ. ಇನ್ನೊಂದೆಡೆ, ದೇಶದಲ್ಲಿ ಕೋವಿಡ್‌ಗೆ 31 ಸಾವುಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು