ಭಾನುವಾರ, ಅಕ್ಟೋಬರ್ 2, 2022
19 °C

ಚೀನಾ: 35 ಜನರಲ್ಲಿ ‘ಹೆನಿಪಾವೈರಸ್‌’ ಸೋಂಕು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಪ್ರಾಣಿಗಳಲ್ಲಿ ಜನಿಸಿದ ವೈರಸ್‌ ಮೂಲಕ ಹರಡುವ ಸೋಂಕಿನ ಪ್ರಕರಣಗಳು ಚೀನಾದಲ್ಲಿ ವರದಿಯಾಗಿವೆ. ಹೊಸ ವಿಧದ ಈ ಸೋಂಕು ಶಾಂಡಾಂಗ್ ಮತ್ತು ಹೆನಾನ್‌ ಪ್ರಾಂತ್ಯದಲ್ಲಿ ಒಟ್ಟು 35 ಜನರಲ್ಲಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ಮಂಗಳವಾರ ವರದಿ ಮಾಡಿದೆ.

ಈ ಹೊಸ ವಿಧದ ವೈರಸ್‌ಅನ್ನು ಹೆನಿಪಾವೈರಸ್ ಅಥವಾ ಎಲ್‌ಎವೈವಿ (ಲಾಂಗ್ಯಾ ಹೆನಿಪಾವೈರಸ್) ಎಂದು ಕರೆಯಲಾಗುತ್ತದೆ. ಜ್ವರದಿಂದ ಬಳಲುತ್ತಿರುವವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಈ ಸೋಂಕು ಇರುವುದು ಪತ್ತೆಯಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

‘ಈ ಹೊಸ ವೈರಸ್‌ನ ಸೋಂಕಿಗೆ ಒಳಗಾದವರಲ್ಲಿ ಜ್ವರ, ನಿಶ್ಶಕ್ತಿ, ಕೆಮ್ಮು, ಉಬ್ಬಳಿಕೆ, ಸ್ನಾಯುಸೆಳೆತ ಹಾಗೂ ಹಸಿವಿಲ್ಲದಿರುವಿಕೆಯಂತಹ ಲಕ್ಷಣಗಳು ಕಂಡುಬರುತ್ತವೆ’ ಎಂದು ವೈದ್ಯರು ಹೇಳಿದ್ದಾರೆ.

‘ಈ ಸೋಂಕಿಗೆ ಸದ್ಯ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಈ ಸೋಂಕಿನಿಂದಾಗಿ ಈವರೆಗೆ ಮರಣ ಸಂಭವಿಸಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಡ್ಯೂಕ್–ಎನ್‌ಯುಎಸ್‌ ಮೆಡಿಕಲ್‌ ಸ್ಕೂಲ್‌ನ ಪ್ರಾಧ್ಯಾಪಕ ವಾಂಗ್‌ ಲಿನ್‌ಫಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು