ವಾಷಿಂಗ್ಟನ್: ತಾಲಿಬಾನ್‌ಗೆ ಮನ್ನಣೆ ನೀಡಲು ಯಾವುದೇ ಆತುರವಿಲ್ಲ. ಇದು ಜಾಗತಿಕ ಸಮುದಾಯದ ನಿರೀಕ್ಷೆಯನ್ನು ಅವರು ಹೇಗೆ ಈಡೇರಿಸುತ್ತಾರೆ ಎಂಬುದರ ಮೇಲೆ ಅವಲಂಬಿಸಿರುತ್ತದೆ ಎಂದುಅಮೆರಿಕ ಹೇಳಿದೆ.
ಅಫ್ಗಾನಿಸ್ತಾನದಲ್ಲಿ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿರುವ ಅಮೆರಿಕ ಸೈನ್ಯ ನಿರ್ಗಮಿಸಿದೆ. ಇದರೊಂದಿಗೆ ಅಫ್ಗನ್ ನೆಲೆ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗಿದೆ.
'ತಾಲಿಬಾನ್‌ಗೆ ಮನ್ನಣೆ ನೀಡಲು ಯಾವುದೇ ಆತುರವಿಲ್ಲ. ಇದು ಅವರ ನಡವಳಿಕೆಯನ್ನು ಅವಲಂಬಿಸಿರುತ್ತದೆ ಮತ್ತು ಜಾಗತಿಕ ಸಮುದಾಯದ ನಿರೀಕ್ಷೆಗಳನ್ನು ಈಡೇರಿಸುತ್ತದೆಯೇ? ಎಂಬುದರ ಮೇಲೆ ನಿರ್ಧರಿತವಾಗಲಿದೆ' ಎಂದು ಶ್ವೇತಭವನದಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಸುದ್ದಿಗಾರರಿಗೆ ತಿಳಿಸಿದರು.
ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ಇದನ್ನೇ ಪ್ರತಿಪಾದಿಸಿದೆ. 'ನಾವು ನಮ್ಮ ಹಾಗೂ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಈಡೇರಿಸುವ ಮಾತುಕತೆಯನ್ನು ಮುಂದುವರಿಸಲಿದ್ದೇವೆ' ಎಂದು ಸ್ಟೇಟ್ ಹಾಗೂ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ವಿಕ್ಟೋರಿಯಾ ಜೆ ನುಲಾಂಡ್ ತಿಳಿಸಿದ್ದಾರೆ.
'ಈಗ ಅಫ್ಗಾನಿಸ್ತಾನದ ಜನರ ಶೋಚನೀಯ ಸ್ಥಿತಿಯಂತಹ ಕೆಲವು ತುರ್ತು ಸಮಸ್ಯೆಗಳು ಮುಂದಿವೆ. ಈ ವಿಷಯಳಗಳತ್ತ ಗಮನ ಹರಿಸುತ್ತಿದ್ದೇವೆ. ಯಾವುದೇ ಸರ್ಕಾರಕ್ಕೆ ಲಾಭವಾಗದಂತೆ ಮಾನವೀಯ ನೆರವನ್ನು ನೀಡುವುದನ್ನು ಮುಂದುವರಿಸಬೇಕಿದೆ' ಎಂದು ಹೇಳಿದ್ದಾರೆ.
'ಇವೆಲ್ಲವೂ ಸಹಜ ಪ್ರಕ್ರಿಯೆ. ಆದರೆ ಈ ಅಂಶಗಳ ಹೊರತಾಗಿ ಉಳಿದ ವಿಷಯಗಳ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ತಾಲಿಬಾನ್ ತಮ್ಮದೇ ಬದ್ಧತೆಗಳಿಗೆ ಅನುಗುಣವಾಗಿ ಹೇಗೆ ನೆಲೆಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿರಬೇಕು' ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.