ಬುಧವಾರ, ಮೇ 12, 2021
18 °C
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಡಾ.ಡೆನಿಸ್ ಕಳವಳ

ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಿಜವಾದ ಪಿಡುಗು: ಡಾ.ಡೆನಿಸ್

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ‘ಎಲ್ಲ ಬಗೆಯ ಸಂಘರ್ಷಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವು ‘ನಿಜವಾದ ಪಿಡುಗು’ ಆಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ಮತ್ತು ನಿರ್ಬಂಧ ವಿಧಿಸದೇ ಹೋದಲ್ಲಿ ಇಂಥ ದೌರ್ಜನ್ಯಗಳು ಮರುಕಳಿಸುತ್ತಲೇ ಇರುತ್ತವೆ’ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಡಾ.ಡೆನಿಸ್ ಮುಕ್ವೆಗೆ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಈ ಕುರಿತು ಮಾತನಾಡಿರುವ ಡಾ.ಡೆನಿಸ್, ‘ಅತ್ಯಾಚಾರ ಮತ್ತು ಲೈಂಗಿಕ  ಹಿಂಸಾಚಾರವನ್ನು ಯುದ್ಧ ಪ್ರಾಬಲ್ಯ ಮತ್ತು ಭಯೋತ್ಪಾದನೆಯ ತಂತ್ರವಾಗಿ ಬಳಸಲಾಗುತ್ತಿದ್ದು, ಅದರ ವಿರುದ್ಧ ನಾವಿನ್ನೂ ಕೆಂಪು ರೇಖೆಯನ್ನು ಎಳೆಯುವಲ್ಲಿ ವಿಫಲರಾಗಿದ್ದೇವೆ’ ಎಂದು ವಿಷಾದಿಸಿದ್ದಾರೆ.

‘ಕೆಂಪು ರೇಖೆ ಎಂದರೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಅಪರಾಧಿಗಳು ಮತ್ತು ಇಂಥ ದೌರ್ಜನ್ಯಗಳನ್ನು ಪ್ರಚೋದಿಸುವಂಥರಿಗೆ ಆರ್ಥಿಕ ಮತ್ತು ರಾಜಕೀಯವಾಗಿ ನಿರ್ಬಂಧಗಳನ್ನು ವಿಧಿಸುವುದು ಹಾಗೂ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳುವುದು’ ಎಂದು ಡಾ.ಡೆನಿಸ್ ಪ್ರತಿಪಾದಿಸಿದ್ದಾರೆ.

‘ಅಂತರರಾಷ್ಟ್ರೀಯ ಕಾನೂನಿನಲ್ಲಿ  ಪ್ರಗತಿಯಾಗಿದೆ. ಆದರೆ, ಲೈಂಗಿಕ ದೌರ್ಜನ್ಯಗಳು ನಡೆಯದಂತೆ ಕಟ್ಟುಪಾಡುಗಳನ್ನು ವಿಧಿಸುವುದು ಹಾಗೂ ಭದ್ರತಾ ಮಂಡಳಿಯ ನಿರ್ಣಯಗಳನ್ನು ಫಲಿತಾಂಶದ ಮಟ್ಟಕ್ಕೆ ತರುವುದು ಇಂದಿನ ದೊಡ್ಡ ಸವಾಲಾಗಿದೆ. ಸೂಕ್ತ ಹೊಣೆಗಾರಿಕೆ ಮತ್ತು ನ್ಯಾಯ ಪರಿಪಾಲನೆಯ ಮೂಲಕ ಇವುಗಳನ್ನು ತಡೆಯಬಹುದು. ಆದರೆ, ಇಂಥ ಅಪರಾಧ ಎಸಗಿದವರಿಗೆ ಸೂಕ್ತ ಶಿಕ್ಷೆ ನೀಡದೆ ಹೋದಲ್ಲಿ ಮತ್ತೆಮತ್ತೆ ದೌರ್ಜನ್ಯಗಳು ಮರುಕಳಿಸುತ್ತಲೇ ಇರುತ್ತವೆ’ ಎಂದೂ ಡಾ.ಡೆನಿಸ್ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು