ಭಾನುವಾರ, ಅಕ್ಟೋಬರ್ 25, 2020
27 °C

ವಿಶ್ವ ಆಹಾರ ಯೋಜನೆಗೆ 2020ರ ನೊಬೆಲ್‌ ಶಾಂತಿ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನೊಬೆಲ್‌ ಶಾಂತಿ ಪುರಸ್ಕಾರ

2020ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆ (ಡಬ್ಲ್ಯುಎಫ್‌ಪಿ) ಆಯ್ಕೆ ಮಾಡಲಾಗಿದೆ.

ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್‌ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆ ಶ್ರಮಿಸಿದೆ ಹಾಗೂ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ.

ಈ ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿಗೆ 211 ವ್ಯಕ್ತಿಗಳು ಹಾಗೂ 107 ಸಂಸ್ಥೆಗಳು ನಾಮನಿರ್ದೇಶನವಾಗಿದ್ದವು.

ಪ್ರಶಸ್ತಿಯು 10 ಮಿಲಿಯನ್‌ ಕ್ರೋನಾ (ಅಂದಾಜು ₹8 ಕೋಟಿ) ನಗದು ಬಹುಮಾನ ಮತ್ತು ಚಿನ್ನದ ಪದವನ್ನು ಒಳಗೊಂಡಿರಲಿದೆ. ಡಿಸೆಂಬರ್‌ 10ರಂದು ನಾರ್ವೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು