ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ನಿಂದ ಕನ್ನಡಿಗರ ಕರೆತರಲು ನೋಡಲ್‌ ಅಧಿಕಾರಿ

Last Updated 18 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವ ಸಲುವಾಗಿ ಕೇಂದ್ರದ ಜತೆ ಸಮನ್ವಯ ಸಾಧಿಸಲು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಉಮೇಶ್‌ ಕುಮಾರ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಉಮೇಶ್‌ ಕುಮಾರ್ ಅವರನ್ನು ದೂರವಾಣಿ ಸಂಖ್ಯೆ 080-4984444, 9480800187 ಇ– ಮೇಲ್‌ afghan_kar@ksp.gov.in ಮೂಲಕ ಸಂಪರ್ಕಿಸಬಹುದು.

ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ಹೆಸರು, ಅವರು ಇರುವ ಸ್ಥಳ, ಉದ್ಯೋಗ, ಪಾಸ್‌ಪೋರ್ಟ್‌ ವಿವರವನ್ನು ತಿಳಿಸಲು ಸರ್ಕಾರ ಕೋರಿದೆ.

ಭಾರತೀಯ ಶಿಕ್ಷಕರ ಮನವಿ

ನವದೆಹಲಿ:ಕಾಬೂಲ್‌ನ ವಿಶ್ವವಿದ್ಯಾಲಯವೊಂದರಲ್ಲಿ ಸಿಲುಕಿ ರುವ ನಾಲ್ವರುಭಾರತೀಯಪ್ರಾಧ್ಯಾಪಕರು ತಮ್ಮನ್ನು ತಕ್ಷಣ ಭಾರತಕ್ಕೆ ಸ್ಥಳಾಂತರಿಸುವಂತೆ ಬೇಡಿಕೊಂಡಿದ್ದಾರೆ.ಇವರು ಕಾಬೂಲ್‌ನ ಬೆಖ್ತಾರ್‌ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ದೇಶವು ಉಗ್ರರ ವಶವಾದ ನಂತರ ಯಾವುದೇ ಗುಂಡಿನ ಸದ್ದು ಕೇಳಿಲ್ಲ. ಆದರೆ ಪ್ರತಿ ಗಂಟೆ ಕಳೆಯುವಾಗಲೂ ಅನಿಶ್ಚಿತತೆ, ಭೀತಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT