ಗುರುವಾರ , ಡಿಸೆಂಬರ್ 1, 2022
27 °C
ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಣ ಮಿಲಿಟರಿ ಅಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

ಮತ್ತೆ ಎರಡು ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ಅಮೆರಿಕಾ ವಿರುದ್ಧ ಟೀಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಿಯೋಲ್: ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಸಮರಾಭ್ಯಾಸ ನಡೆಸುತ್ತಿರುವುದನ್ನು ಖಂಡಿಸಿರುವ ಉತ್ತರ ಕೊರಿಯಾ, ಮತ್ತೆ ಎರಡು ಕ್ಷಿಪಣಿ ಉಡಾಯಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಜಪಾನ್‌ನತ್ತ ಮೊದಲು ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿತ್ತು. ಬಳಿಕ ಅಮೆರಿಕ ಮತ್ತು ದಕ್ಷಿಣ ಕೊರಿಯಾ, ಜಪಾನ್‌ಗೆ ಬೆಂಬಲವಾಗಿ ಜಂಟಿ ಸಮರಾಭ್ಯಾಸ ನಡೆಸಿದ್ದಲ್ಲದೇ, ಕ್ಷಿಪಣಿ ಉಡಾಯಿಸುವ ಮೂಲಕ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿತ್ತು.

ಉತ್ತರ ಕೊರಿಯಾ ಉಡಾಯಿಸಿದ ಕ್ಷಿಪಣಿ ಜಪಾನ್‌ನ ಸಮುದ್ರದಲ್ಲಿ ಬಿದ್ದು ಪತನವಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಸಮುದ್ರದಲ್ಲಿ ಕ್ಷಿಪಣಿ ಪತನವಾಗಿರುವುದನ್ನು ಜಪಾನ್‌ನ ಕೋಸ್ಟ್‌ಗಾರ್ಡ್ ದೃಢಪಡಿಸಿದೆ.

ಕೊರಿಯಾ ಪ್ರಾಂತ್ಯದಲ್ಲಿ ಅಮೆರಿಕವು ಹಸ್ತಕ್ಷೇಪ ಮಾಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಯುದ್ಧದ ಆತಂಕ ಉಂಟಾಗಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು