ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವಂತಿಲ್ಲ, ಅಳುವಂತಿಲ್ಲ, ಮದ್ಯಪಾನ ಸಲ್ಲ: ಉತ್ತರ ಕೊರಿಯಾದಲ್ಲಿ ಹೀಗೊಂದು ಆದೇಶ!

Last Updated 18 ಡಿಸೆಂಬರ್ 2021, 10:41 IST
ಅಕ್ಷರ ಗಾತ್ರ

ಪ್ಯಾಂಗಾಂಗ್: ಉತ್ತರ ಕೊರಿಯಾದಲ್ಲಿ 11 ದಿನಗಳ ಕಾಲ ಯಾರೂ ನಗಾಡುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ! ಹೀಗೊಂದು ವಿಚಿತ್ರ ಆದೇಶವನ್ನು ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೊರಡಿಸಿದ್ದಾರೆ.

ದೇಶದ ಮಾಜಿ ಪರಮೋಚ್ಚ ನಾಯಕ ಕಿಮ್ ಜಾಂಗ್ ಇಲ್ ಅವರ ಪುಣ್ಯ ಸ್ಮರಣೆ ಪ್ರಯುಕ್ತ ದೇಶದಾದ್ಯಂತ 11 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ನಗಾಡುವುದು, ಮದ್ಯಪಾನ ಮಾಡುವುದನ್ನೂ ನಿಷೇಧಿಸಲಾಗಿದೆ.

ಕಿಮ್ ಜಾಂಗ್ ಇಲ್ ಅವರು 2011ರ ಡಿಸೆಂಬರ್ 17ರಂದು ಮೃತಪಟ್ಟಿದ್ದರು. 1994ರಿಂದ ತಮ್ಮ ಜೀವನದ ಕೊನೆಯ ದಿನದವರೆಗೂ ದೇಶದ ಪರಮೋಚ್ಚ ನಾಯಕರಾಗಿದ್ದರು.

ಶೋಕಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಕೊರಿಯಾ ನಿವಾಸಿಗಳು, ನಾವು ಡಿಸೆಂಬರ್ 17ರಿಂದ ದಿನಸಿ ವಸ್ತುಗಳ ಖರೀದಿ ಮಾಡುವಂತೆಯೂ ಇಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಶೋಕಾಚರಣೆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಅನೇಕರನ್ನು ಸೈದ್ಧಾಂತಿಕ ಅಪರಾಧಿಗಳು ಎಂದು ಪರಿಗಣಿಸಲಾಗಿತ್ತು. ಅಂಥವರನ್ನು ಬಂಧಿಸಿ ಕರೆದೊಯ್ಯಲಾಗಿದ್ದು, ಅವರನ್ನು ಮತ್ತೆಂದೂ ನೋಡಿಲ್ಲ ಎಂದು ಉತ್ತರ ಕೊರಿಯಾ ನಿವಾಸಿಗಳ ಹೇಳಿಕೆ ಉಲ್ಲೇಖಿಸಿ ‘ಎಕ್ಸ್‌ಪ್ರೆಸ್ ಡಾಟ್ ಕೊ ಯುಕೆ’ ಸುದ್ದಿತಾಣ ವರದಿ ಮಾಡಿದೆ.

ಶೋಕಾಚರಣೆಯ ದಿನಗಳಲ್ಲಿ ಕುಟುಂಬದ ಯಾರಾದರೂ ಸದಸ್ಯರು ಮೃತಪಟ್ಟರೆ ಜೋರಾಗಿ ಅಳುವಂತೆಯೂ ಇಲ್ಲ. ಶೋಕಾಚರಣೆ ದಿನಗಳು ಕಳೆದ ಬಳಿಕವಷ್ಟೇ ಮೃತದೇಹವನ್ನು ಹೊರತೆಗೆಯಲು ಅನುಮತಿ ಇದೆ. ಹುಟ್ಟುಹಬ್ಬ ಆಚರಿಸುವಂತೆಯೂ ಇಲ್ಲ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT