ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್ ವಿರುದ್ಧ ಒಬಾಮ ವಾಗ್ದಾಳಿ

Last Updated 1 ನವೆಂಬರ್ 2020, 12:32 IST
ಅಕ್ಷರ ಗಾತ್ರ

ಪಿಟ್ಸ್‌ಬರ್ಗ್‌, ಅಮೆರಿಕ: ‘ತಮ್ಮ ಅಹಂಕಾರದ ಪೋಷಣೆಗೆ ಮಾತ್ರವೇ ಗಮನಹರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಹಿತಾಸಕ್ತಿಗಷ್ಟೇ ಆದ್ಯತೆ ನೀಡುತ್ತಾರೆ. ಅನ್ಯರಿಗೆ ಸಹಾಯ ಮಾಡುವ ಆಸಕ್ತಿಯನ್ನು ಅವರು ಹೊಂದಿಲ್ಲ’ ಎಂದು ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಆರೋಪಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಪರವಾಗಿ ಮಿಚಿಗನ್‌ನಲ್ಲಿ ನಡೆದ ರ‍್ಯಾಲಿಯಲ್ಲಿ, ಟ್ರಂಪ್‌ ಆಡಳಿತ ನೀತಿ ಮತ್ತು ವಾಕ್ಚಾರ್ತುಯದ ವಿರುದ್ಧ ಒಬಾಮ ವಾಗ್ದಾಳಿ ನಡೆಸಿದರು.

‘ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಟ್ರಂಪ್‌ ಜನರಿಗೆ ನೆರವಾಗುವ ಆಸಕ್ತಿ ಪ್ರದರ್ಶಿಸಿಲ್ಲ. ಜೋ ಬಿಡೆನ್‌ ಅವರು, ಪ್ರತಿಯೊಬ್ಬರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಜೊತೆಗೆ ಗೌರವ ನೀಡುವ ಸ್ವಭಾವ ಹೊಂದಿದ್ದಾರೆ’ ಎಂದರು.

ಟ್ರಂಪ್‌ ಅವರು, ‘ಶ್ವೇತ ಭವನದಲ್ಲಿ ರಿಯಾಲಿಟಿ ಶೋ ನಡೆಸುತ್ತಿದ್ದಾರೆ. ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದರೂ, ಟ್ರಂಪ್‌ ತಲೆ ಕೆಡಿಸಿಕೊಂಡಿಲ್ಲ. ಅದುವೇ ಟ್ರಂಪ್‌ ಮತ್ತು ಬಿಡೆನ್‌ಗೂ ಇರುವ ವ್ಯತ್ಯಾಸ. ಬಿಡೆನ್‌ ಅವರು ನಿಮ್ಮ ಮತ್ತು ನಿಮ್ಮ ಕುಟುಂಬದ ಕುರಿತು ಕಾಳಜಿ ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT