ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಟಾ ತಳಿಗಿಂತ ಓಮೈಕ್ರಾನ್‌ ಸೋಂಕಿನಿಂದಾಗುವ ಬಾಧೆ ಕಡಿಮೆ

‘ಲ್ಯಾನ್ಸೆಟ್‌’ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ ಪ್ರಕಟ
Last Updated 21 ಜೂನ್ 2022, 13:36 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಸ್‌ನ ರೂಪಾಂತರಿ ಡೆಲ್ಟಾ ತಳಿಗೆ ಹೋಲಿಸಿದರೆ, ಓಮೈಕ್ರಾನ್‌ ತಳಿಯಿಂದ ತಗಲುವ ಸೋಂಕು ದೀರ್ಘಕಾಲದವರೆಗೆ (ಲಾಂಗ್‌ ಕೋವಿಡ್‌) ಬಾಧಿಸುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಲಂಡನ್‌ನ ಕಿಂಗ್ಸ್‌ ಕಾಲೇಜಿನ ಸಂಶೋಧಕರ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, ‘ಲ್ಯಾನ್ಸೆಟ್‌’ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಕೋವಿಡ್‌ ದೃಢಪಟ್ಟ ವ್ಯಕ್ತಿಯಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಅಥವಾ ನಾಲ್ಕು ವಾರಗಳ ನಂತರವೂ ಕಾಯಿಲೆಯ ಲಕ್ಷಣಗಳು ಇರುವುದನ್ನು ದೀರ್ಘಕಾಲದ ಕೋವಿಡ್ (ಲಾಂಗ್‌ ಕೋವಿಡ್‌) ಎನ್ನಲಾಗುತ್ತದೆ.

ನಿತ್ರಾಣ, ಉಸಿರಾಟದ ತೊಂದರೆ, ಏಕಾಗ್ರತೆ ಕ್ಷೀಣಿಸುವುದು, ಕೀಲು ನೋವು– ಇವು ದೀರ್ಘಕಾಲದ ಕೋವಿಡ್‌ನ ಲಕ್ಷಣಗಳು. ಈ ಸಮಸ್ಯೆಗಳು ವ್ಯಕ್ತಿಯ ದೈನಂದಿನ ಕಾರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಅಡ್ಡಿಯನ್ನುಂಟು ಮಾಡಲೂಬಹುದು ಎಂದು ತಜ್ಞರು ಹೇಳುತ್ತಾರೆ.

‘ಸೋಂಕಿನ ತೀವ್ರತೆಯು, ಸೋಂಕಿತನ ವಯಸ್ಸು ಹಾಗೂ ಆತ ಕೋವಿಡ್‌ ಲಸಿಕೆ ತೆಗೆದುಕೊಂಡು ಎಷ್ಟು ದಿನಗಳ ನಂತರ ಸೋಂಕು ತಗುಲಿತ್ತು ಎಂಬುದನ್ನು ಅವಲಂಬಿಸಿದೆ’ ಎಂದೂ ಅಧ್ಯಯನದಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT