ಶುಕ್ರವಾರ, ಮಾರ್ಚ್ 31, 2023
22 °C

ನೇಪಾಳ ವಿಮಾನ ದುರಂತ: ಪಶುಪತಿನಾಥನನ್ನು ಕನಸಿನಲ್ಲಿ ಕಾಣುತ್ತಿದ್ದರು!

ಪಿಟಿಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಐವರು ಭಾರತೀಯರ ಪೈಕಿ ಒಬ್ಬರು ಕನಸಿನಲ್ಲಿ ಪಶುಪತಿನಾಥ ದೇವರನ್ನು ಕಾಣುತ್ತಿದ್ದರು. ಇದೇ ಕಾರಣದಿಂದ ಅವರು ನೇಪಾಳಕ್ಕೆ ಭೇಟಿ ನೀಡಿದ್ದರು ಎಂದು ನೇಪಾಳದ ಅಜಯ್‌ ಶಾ ಎಂಬವರು ತಿಳಿಸಿದ್ದಾರೆ.

 ‘ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಚಿತರಾಗಿದ್ದ ಜೈಸ್ವಾಲ್‌ ಅವರು, ಪಶುಪತಿನಾಥನನ್ನು ಕನಸಿನಲ್ಲಿ ಕಾಣುತ್ತಿರುವುದಾಗಿ ತಿಳಿಸಿದ್ದರು. ನೇಪಾಳಕ್ಕೆ ನಾಲ್ವರು ಸ್ನೇಹಿತರೊಡನೆ ಬಂದಾಗ ಅವರನ್ನು ದೇಗುಲಕ್ಕೆ ಕರೆದುಕೊಂಡು ಹೋಗಿದ್ದೆ. ಭಾನುವಾರ ಬೆಳಿಗ್ಗೆ ವಿಮಾನ ನಿಲ್ದಾಣದ ವರೆಗೂ ಬಿಟ್ಟುಬಂದಿದ್ದೆ’ ಎಂದು ಅವರು ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು