ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಕೊರತೆ: ಭಾರತಕ್ಕೆ ಆಪತ್ಭಾಂದವನಾಗಿದ್ದ ಇಂಡೋನೇಷ್ಯಾದಲ್ಲೀಗ ಸಮಸ್ಯೆ

Last Updated 11 ಜುಲೈ 2021, 2:48 IST
ಅಕ್ಷರ ಗಾತ್ರ

ಜಕಾರ್ತ: ಎರಡು ತಿಂಗಳ ಹಿಂದಷ್ಟೆ ಭಾರತದಲ್ಲಿ ಆಮ್ಲಜನಕ ಕೊರತೆಯಾಗಿದ್ದ ಸಂದರ್ಭ ಸಾವಿರಾರು ಆಮ್ಲಜನಕ ಟ್ಯಾಂಕ್‌ಗಳನ್ನು ಒದಗಿಸುವ ಮೂಲಕ ನೆರವಿಗೆ ಬಂದಿದ್ದ ಇಂಡೋನೇಷ್ಯಾದಲ್ಲಿ ಈಗ ಆಮ್ಲಜನಕ ಕೊರತೆ ಉಂಟಾಗಿದೆ.

ಕೋವಿಡ್‌ 19 ರೋಗಿಗಳಿಗೆ ಆಮ್ಲಜನಕ ಕೊರತೆ ಉಂಟಾಗಿದ್ದು ತುರ್ತು ನೆರವಿಗೆ ಧಾವಿಸುವಂತೆ ಸಿಂಗಾಪುರ ಮತ್ತು ಚೀನಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಮನವಿ ಸಲ್ಲಿಸಿದೆ.

ತಕ್ಷಣ ನೆರವಿಗೆ ಧಾವಿಸಿರುವ ಸಿಂಗಾಪುರ 1,000 ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ನೆರವಿನ ಉಪಕರಣಗಳನ್ನು ಇಂಡೋನೇಷ್ಯಾಗೆ ಕಳುಹಿಸಿಕೊಟ್ಟಿದೆ. ಮತ್ತೊಂದು ಸುತ್ತಿನಲ್ಲಿ ಇಷ್ಟೇ ಪ್ರಮಾಣದ ನೆರವನ್ನು ಆಸ್ಟ್ರೇಲಿಯಾ ಒದಗಿಸಿದೆ ಎಂದು ಇಂಡೋನೇಷ್ಯಾದ ಕೋವಿಡ್‌ ನಿರ್ವಹಣಾ ಸಚಿವ ಲುಹುಟ್‌ ಬಿನ್‌ಸಾರ್‌ ಪಂಡ್‌ಜೈತನ್‌ ತಿಳಿಸಿದ್ದಾರೆ.

ನೆರವಿನ ನಡುವೆ ಸಿಂಗಾಪುರದಿಂದ 36,000 ಟನ್‌ ಆಮ್ಲಜನಕ ಮತ್ತು ಆಮ್ಲಜನಕ ಉತ್ಪಾದಿಸುವ 10,000 ಕಾನ್ಸೆಂಟ್ರೇಟರ್‌ ಉಪಕರಣಗಳನ್ನು ಖರೀದಿಸಲು ಇಂಡೋನೇಷ್ಯಾ ಮುಂದಾಗಿದೆ. ಚೀನಾ, ಅಮೆರಿಕಾ ಮತ್ತು ಅರಬ್‌ ರಾಷ್ಟ್ರಗಳ ನಡುವೆ ಸಂಪರ್ಕದಲ್ಲಿದ್ದು, ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಲುಹುಟ್‌ ಬಿನ್‌ಸಾರ್‌ ಹೇಳಿದ್ದಾರೆ.

ವಿಶ್ವದ ನಾಲ್ಕನೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಇಂಡೋನೇಷ್ಯಾದಲ್ಲಿ ಇದುವರೆಗೆ ಕೋವಿಡ್‌ನಿಂದ 63,760 ಮಂದಿ ಮೃತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT