ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಸಿನೊಫಾರ್ಮ್ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

Last Updated 19 ಜನವರಿ 2021, 10:38 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಚೀನಾ ಅಭಿವೃದ್ಧಿಪಡಿಸಿದ ಸಿನೊಫಾರ್ಮ್ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಪಾಕಿಸ್ತಾನ ಸೋಮವಾರ ಅನುಮೋದನೆ ನೀಡಿದೆ.

ಪಾಕಿಸ್ತಾನ ಔಷಧಿ ನಿಯಂತ್ರಣ ಪ್ರಾಧಿಕಾರವು (ಡಿಆರ್‌ಪಿ) ಇತ್ತೀಚಿಗೆ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಗೆ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಸಿನೊಫಾರ್ಮ್ ಲಸಿಕೆಯ ತುರ್ತು ಬಳಕೆಗೂ ಅನುಮೋದನೆ ನೀಡಿದೆ.

‘ರಾಷ್ಟ್ರೀಯ ಆರೋಗ್ಯ ಸಂಸ್ಥೆಯು(ಎನ್‌ಐಎಚ್‌)ಸಿನೊಫಾರ್ಮ್ ಕೋವಿಡ್‌ ಲಸಿಕೆಗಾಗಿ ತನ್ನ ಹೆಸರನ್ನು ನೊಂದಾಯಿಸಿದೆ. ಈ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ’ ಎಂದು ಡಿಆರ್‌ಪಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅಸಿಮ್ ರವೂಫ್ ಅವರು ತಿಳಿಸಿದರು.

‘ಈಗಾಗಲೇಪಾಕಿಸ್ತಾನವು ಸಿನೊಫಾರ್ಮ್ ಲಸಿಕೆಯ 11 ಲಕ್ಷ ಡೋಸ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದೆ. ಆದಷ್ಟು ಬೇಗ ಅದನ್ನು ಪಾಕಿಸ್ತಾನಕ್ಕೆ ಕರೆತರಲಾಗುವುದು’ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 1800 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 5,23,011ಕ್ಕೆ ಏರಿಕೆಯಾಗಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಈವರೆಗೆ ಒಟ್ಟು 11,055 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯವು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT