ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಹಫೀಜ್‌ ಸಹಚರರು ದೋಷಿ: ಪಾಕ್‌ ಕೋರ್ಟ್‌

ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ
Last Updated 17 ಸೆಪ್ಟೆಂಬರ್ 2020, 9:06 IST
ಅಕ್ಷರ ಗಾತ್ರ

ಲಾಹೋರ್‌:ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್,‌ ನಿಷೇಧಿತ ಜಮಾತ್‌–ಉದ್‌–ದಾವಾ (ಜೆಯುಡಿ) ಉಗ್ರ ಸಂಘಟನೆಯ ನಾಲ್ವರ ಸದಸ್ಯರು ದೋಷಿಗಳು ಎಂದು ಬುಧವಾರ ಹೇಳಿದೆ.

ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆಹಫೀಜ್‌ ಅಬ್ದುಲ್‌ ರೆಹಮಾನ್‌ ಮಕ್ಕಿ, ಯಾಹ್ಯಾ ಮುಜಾಹಿದ್‌, ಜಫರ್‌ ಇಕ್ಬಾಲ್‌ ಹಾಗೂ ಮುಹಮ್ಮದ್‌ ಅಶ್ರಫ್‌ ಎಂಬುವವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ‘ ಎಂದು ಕೋರ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಾಲ್ವರು, ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಸೂತ್ರಧಾರಿ ಹಫೀಜ್‌ ಸಯೀದ್‌ ಸಹಚರರು. ಈ ಪೈಕಿ ಹಫೀಜ್‌ ಅಬ್ದುಲ್‌ ರೆಹಮಾನ್‌ ಎಂಬಾತ ಸಯೀದ್‌ನ ಬಾಮೈದುನ. ಯಾಹ್ಯಾ ಮುಜಾಹಿದ್‌ ಜೆಯುಡಿಯ ವಕ್ತಾರ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT