ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಫೋಟಕಗಳಿದ್ದ ಪಾಕ್‌ ಡ್ರೋನ್‌ ಧರೆಗುರುಳಿಸಿದ ಜಮ್ಮು ಪೊಲೀಸರು

Last Updated 29 ಮೇ 2022, 10:53 IST
ಅಕ್ಷರ ಗಾತ್ರ

ಜಮ್ಮು:ಏಳು ಮ್ಯಾಗ್ನೆಟಿಕ್ ಬಾಂಬ್‌ಗಳು, ಏಳು ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌) ಗ್ರೆನೇಡ್‌ಗಳನ್ನು ಹೊತ್ತ ಪಾಕಿಸ್ತಾನದ ಡ್ರೋನ್ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಪೊಲೀಸರ ಶೋಧನಾ ತಂಡ ಹೊಡೆದುರುಳಿಸಿದೆ.

‘ತಳ್ಳಿ ಹರಿಯ ಚಕ್ ಪ್ರದೇಶದಲ್ಲಿ ಬೆಳಿಗ್ಗೆಅಂತರರಾಷ್ಟ್ರೀಯ ಗಡಿ ದಾಟಿ ಬಂದಡ್ರೋನ್‌ ಅನ್ನು ನಮ್ಮ ಶೋಧನಾ ತಂಡ ಗುರುತಿಸಿ, ಗುಂಡು ಹಾರಿಸಿ ಧರೆಗುರುಳಿಸಿದೆ. ಡ್ರೋನ್‌ನ ಪೇಲೋಡ್ ಅನ್ನು ಬಾಂಬ್ ನಿಷ್ಕ್ರಿಯ ದಳವು ಪರೀಕ್ಷಿಸಿದಾಗ ಮ್ಯಾಗ್ನೆಟಿಕ್ ಬಾಂಬ್‌ಗಳು ಮತ್ತು ಯುಬಿಜಿಎಲ್‌ ಗ್ರೆನೇಡ್‌ಗಳು ಅದರಲ್ಲಿ ಪತ್ತೆಯಾಗಿವೆ’ ಎಂದು ಸಿಂಗ್ ಹೇಳಿದರು.

ಗಡಿಯಾಚೆಯಿಂದ ಆಗಾಗ ಡ್ರೋನ್‌ ಮೂಲಕ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು, ಪೊಲೀಸ್ ಶೋಧನಾ ತಂಡಗಳುಆ ಪ್ರದೇಶದಲ್ಲಿ ನಿರಂತರ ನಿಗಾವಹಿಸಿವೆ ಎಂದು ಅವರು ಹೇಳಿದರು.

‌ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆಯ ವಾರ್ಷಿಕ43 ದಿನಗಳ ಯಾತ್ರೆಯು ಜೂನ್ 30ರಂದು ಆರಂಭವಾಗಲಿದ್ದು,ಈ ಘಟನೆಯಿಂದಾಗಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT