ಮಂಗಳವಾರ, ಮಾರ್ಚ್ 28, 2023
23 °C

ಮೊಬೈಲ್‌ ರಫ್ತುದಾರ ರಾಷ್ಟ್ರವಾದ ಪಾಕಿಸ್ತಾನ: ಯುಎಇಗೇ ಫೋನ್‌ಗಳ ರವಾನೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನವು ಸ್ಮಾರ್ಟ್‌ ಫೋನ್‌ಗಳ ತಯಾರಿ ಮತ್ತು ರಫ್ತು ಆರಂಭಿಸಿದೆ. ‘ಮ್ಯಾನಿಫ್ಯಾಕ್ಚರ್‌ ಇನ್‌ ಪಾಕಿಸ್ತಾನ್‌’ ಎಂಬ ಗುರುತುಳ್ಳ ಫೋನ್‌ಗಳನ್ನು ಪಾಕಿಸ್ತಾನ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ಗೆ (ಯುಎಇ) ರವಾನಿಸಿದೆ.

‘ಇನೋವಿ ಟೆಲಿಕಾಂ’ ಸಂಸ್ಥೆ ತಯಾರಿಸಿದ 5,500 4ಜಿ ಮೊಬೈಲ್‌ ಫೋನ್‌ಗಳನ್ನು ಮೊದಲ ಹಂತದಲ್ಲಿ ಶುಕ್ರವಾರ ಯುಎಇಗೆ ರಫ್ತು ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ‘ಡಾನ್’ ಭಾನುವಾರ ವರದಿ ಮಾಡಿದೆ.

ಆದಾಗ್ಯೂ, ದೇಶದಲ್ಲಿ ರಫ್ತು ಬೆಂಬಲಿಸುವ ನೀತಿಯ ಅಗತ್ಯವನ್ನು ಮೊಬೈಲ್ ಫೋನ್ ತಯಾರಕ ಸಂಸ್ಥೆಗಳು ಪ್ರತಿಪಾದಿಸಿವೆ. ಈ ಮೂಲಕ ಮಧ್ಯಪ್ರಾಚ್ಯದ ಸ್ಪರ್ಧಿಗಳನ್ನು ಮಣಿಸಲು ಪಾಕಿಸ್ತಾನಕ್ಕೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಈ ಸಾಧನೆಗಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಶನಿವಾರ ಕಂಪನಿಯನ್ನು ಅಭಿನಂದಿಸಿದೆ ಮತ್ತು ಸ್ಮಾರ್ಟ್ ಫೋನುಗಳ ರಫ್ತು ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸಿದೆ.

‘ದೇಶದಲ್ಲಿ ಮೊಬೈಲ್ ಸಾಧನ ತಯಾರಿಕೆಗೆ ಪೂರಕವಾದ ಪರಿಸರ ಅಭಿವೃದ್ಧಿಗೆ ಕೈಗೊಂಡ ಸಂಘಟಿತ ಪ್ರಯತ್ನಗಳ ಫಲವಿದು‘ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಮೊಬೈಲ್ ಸಾಧನ ತಯಾರಿಕೆಗೆ ಇನೋವಿ ಟೆಲಿಕಾಂ ಪ್ರೈವೇಟ್ ಲಿಮಿಟೆಡ್‌ಗೆ ಏಪ್ರಿಲ್‌ನಲ್ಲಿ ಅನುಮತಿ ನೀಡಲಾಗಿತ್ತು. ನಾಲ್ಕೇ ತಿಂಗಳಲ್ಲಿ ಕಂಪನಿಯು ಆರ್ಡರ್‌ಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು