ಮಂಗಳವಾರ, ಮೇ 17, 2022
24 °C

ಚೀನಾ ಕೊಟ್ಟ ಲಸಿಕೆ ಪರಿಣಾಮಕಾರಿಯಲ್ಲ ಎಂದ ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಚೀನಾದ 'ಸಿನೊಫಾರ್ಮ್' ಕೋವಿಡ್‌ ಲಸಿಕೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಪರಿಣಾಮಕಾರಿಯಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ಚೀನಾದ ಲಸಿಕೆಯೊಂದಿಗೆ ದೇಶದಾದ್ಯಂತ ಲಸಿಕೆ ಅಭಿಯಾನ ಆರಂಭಿಸಿದ ಮರುದಿನವೇ ಪಾಕ್‌ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಚೀನಾವು ಕಳೆದ ಸೋಮವಾರ ಪಾಕಿಸ್ತಾನಕ್ಕೆ ಐದು ಲಕ್ಷ ಸಿನೊಫಾರ್ಮ್‌ ಲಸಿಕೆಗಳನ್ನು ದಾನವಾಗಿ ನೀಡಿತ್ತು. ವಿಶೇಷ ವಿಮಾನದ ಮೂಲಕ ಪಾಕಿಸ್ತಾನಕ್ಕೆ ಲಸಿಕೆಗಳನ್ನು ರವಾನಿಸಲಾಗಿತ್ತು.

'ಲಸಿಕೆ 18-60 ವರ್ಷದವರಿಗೆ ಮಾತ್ರ ಶಿಫಾರಸು ಮಾಡಬಹುದು ಎಂದು ಪಾಕಿಸ್ತಾನದ ತಜ್ಞರ ಸಮಿತಿಯು ಪ್ರಾಥಮಿಕ ಅಧ್ಯಯನದ ನಂತರ ತಿಳಿಸಿದೆ. ಇದನ್ನು 60 ವರ್ಷ ಮೇಲ್ಪಟ್ಟವರಿಗೆ ಸಮಿತಿ ಶಿಫಾರಸು ಮಾಡಿಲ್ಲ,' ಎಂದು ಪ್ರಧಾನಮಂತ್ರಿಯ ವಿಶೇಷ ಸಹಾಯಕ (ಆರೋಗ್ಯ) ಡಾ. ಫಾಸಿಲ್‌ ಸುಲ್ತಾನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬುಧವಾರ ದೇಶದಾದ್ಯಂತ ಲಸಿಕೆ ಅಭಿಯಾನ ಆರಂಭಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು